ಮೈಸೂರಿನಲ್ಲಿ ಮತ್ತೆ ಕೊರೋನ ಸೋಂಕು ಪತ್ತೆ: ಮುಂಬೈನಿಂದ ಆಗಮಿಸಿದ್ದ ವ್ಯಕ್ತಿಗೆ ಸೋಂಕು ದೃಢ

Update: 2020-05-18 14:40 GMT
ಸಾಂದರ್ಭಿಕ ಚಿತ್ರ

ಮೈಸೂರು,ಮೇ.18: ಕೊರೋನ ಮುಕ್ತವಾಗಿದ್ದ ಮೈಸೂರು ಜಿಲ್ಲೆಯಲ್ಲಿ ಇದೀಗ ಮತ್ತೆ ಕೊರೋನ ವೈರಸ್ ಕಾಣಿಸಿಕೊಂಡು ಆತಂಕ ಸೃಷ್ಟಿಸಿದೆ.
ಕೊರೋನ ವೈರಸ್ ಮುಕ್ತವಾಗಿದ್ದ ಮೈಸೂರಿಗೆ ಮತ್ತೆ ಕೊರೋನ ಎಂಟ್ರಿ ಕೊಟ್ಟಿದೆ. ಕೆ. ಆರ್. ನಗರ ತಾಲ್ಲೂಕಿನ ಸಾಲಿಗ್ರಾಮ ಮೂಲದ ವ್ಯಕ್ತಿಗೆ ಕೊರೋನ ಸೋಂಕು ತಗುಲಿರುವುದು ದೃಢಪಟ್ಟಿದೆ. ಮುಂಬೈಯಿಂದ ಬಂದಿದ್ದ ವ್ಯಕ್ತಿಗೆ ಕೊರೋನ ಸೋಂಕು ತಗುಲಿರುವುದು ಪತ್ತೆಯಾಗಿದೆ.

ಮುಂಬೈಯಿಂದ ಬಂದಿದ್ದ ವ್ಯಕ್ತಿಯನ್ನು ಫೆಸಿಲಿಟಿ ಕ್ವಾರಂಟೈನ್‍ನಲ್ಲಿ ಇಡಲಾಗಿತ್ತು. 14 ದಿನಗಳ ನಂತರ ಈತನ ಗಂಟಲು ಮತ್ತು ರಕ್ತ ಮಾದರಿಯನ್ನು ಪರೀಕ್ಷಿಸಿದಾಗ ಕೊರೋನ ಸೋಂಕು ಇರುವುದು ದೃಢಪಟ್ಟಿದೆ. ಕಳೆದ 18 ದಿನಗಳಿಂದ ಯಾವುದೇ ಕೊರೋನ ಕೇಸ್ ಪತ್ತೆಯಾಗಿರಲಿಲ್ಲ. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News