ಉತ್ತರ ಕನ್ನಡ ಜಿಲ್ಲೆಯಲ್ಲಿ ಇಂದು 9 ಕೊರೋನ ಪ್ರಕರಣ ಪತ್ತೆ

Update: 2020-05-18 15:37 GMT

ಕಾರವಾರ: ಕೊರೋನ ವೈರಸ್ ಉತ್ತರ ಕನ್ನಡ ಜಿಲ್ಲೆಯಲ್ಲಿ ಹೆಚ್ಚುತ್ತಲೇ ಇದ್ದು ಹೊಸದಾಗಿ ಹೊನ್ನಾವರ, ಮುಂಡಗೋಡ ಹಾಗೂ, ಮುರುಡೇಶ್ವರ, ಕಾರವಾರಕ್ಕೂ ವ್ಯಾಪಿಸಿದೆ. ಸೋಮವಾರ ಒಟ್ಟು 9 ಪ್ರಕರಣಗಳು ಮತ್ತೆ ದೃಢಪಟ್ಟಿದೆ.

ಇವರಲ್ಲಿ ಎಂಟು ಜನರು ಅಂತರ್ ರಾಜ್ಯ ಪ್ರಯಾಣದ ಹಿನ್ನೆಲೆ ಹೊಂದಿದ್ದು, ಕಳೆದ ಕೆಲವು ದಿನಗಳ ಹಿಂದೆ ಮುಂಬೈಯಿಂದ ವಾಪಸ್ಸಾಗಿದ್ದರು. ಕಳೆದ ಎಂಟು ದಿನಗಳ ಮುಂಬೈನ ರತ್ನಗಿರಿಯಿಂದ ಉತ್ತರ ಕನ್ನಡ ಜಿಲ್ಲೆಗೆ ಆಗಮಿಸಿದ್ದ ಹಲವರನ್ನು ಆಯಾ ತಾಲೂಕಿನಲ್ಲಿ ಕ್ವಾರಂಟೈನ್ ಮಾಡಲಾಗಿತ್ತು.

ಹೊನ್ನಾವರದ ಪ್ರಭಾತ್ ನಗರದ ಸರಕಾರಿ ಕ್ವಾರಂಟೈನ್ ನಲ್ಲಿದ್ದ ರತ್ನಗಿರಿಯಿಂದ ಬಂದ ಒಂದೇ ಕುಟುಂಬದ ನಾಲ್ವರಲ್ಲಿ ಕೊರೋನ ಸೋಂಕು ದೃಢಪಟ್ಟಿದೆ. ಮುರುಡೇಶ್ವರದಲ್ಲಿ ಒಂದು ಹಾಗೂ ಮುಂಡಗೋಡ, ಕಾರವಾರ ತಾಲೂಕಿನಲ್ಲಿ ಒಬ್ಬರಲ್ಲಿ ಸೋಂಕು ಪತ್ತೆಯಾಗಿದ್ದು ಇವರು ಕೂಡಾ ಮುಂಬೈನಿಂದಲೇ ಬಂದಿದ್ದಾರೆ. ಭಟ್ಕಳ ತಾಲೂಕಿನಲ್ಲಿ 659 ನೇ ಸೋಂಕಿತೆಯ ಸಂಪರ್ಕದಲ್ಲಿದ್ದ ಎರಡು ವರ್ಷದ ಹೆಣ್ಣು ಮಗುವಿನಲ್ಲೂ ಸೋಂಕು ಪತ್ತೆಯಾಗಿದೆ.

ಪ್ರಭಾತ್ ನಗರದಲ್ಲಿ ಕ್ವಾರಂಟೈನ್ ಇದ್ದ ಸರಕಾರಿ ಕೇಂದ್ರದ ಪ್ರದೇಶವನ್ನು ರವಿವಾರ ತಡರಾತ್ರಿ ಪೊಲೀಸರು ಸಿಲ್ ಡೌನ್ ಮಾಡಿದ್ದು ಕೇಂದ್ರ ಸುತ್ತಮುತ್ತ ಪೊಲೀಸ್ ಬಂದೋಬಸ್ತು ಮಾಡಲಾಗಿದೆ. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News