ಕೆರೆಗೆ ಹಾರಿ ಬಾಲಕಿ ಆತ್ಮಹತ್ಯೆ
Update: 2020-05-19 22:05 IST
ಹಾಸನ, ಮೇ.19: ಬಾಲಕಿಯೊರ್ವಳು ಕೆರೆಗೆ ಹಾರಿ ಆತ್ಮಹತ್ಯೆ ಮಾಡಿಕೊಂಡ ಘಟನೆ ಮಂಗಳವಾರ ಬೆಳಕಿಗೆ ಬಂದಿದ್ದು, ಮೊಬೈಲ್ ಬಳಕೆ ಕಡಿಮೆ ಮಾಡುವಂತೆ ಮನೆಯಲ್ಲಿ ಪೋಷಕರು ಬುದ್ದಿವಾದ ಹೇಳಿದ್ದೇ ಸಾವಿಗೆ ಕಾರಣ ಎನ್ನಲಾಗುತ್ತಿದೆ.
ಹಾಸನ ನಗರದ ಗೌರಿಕೊಪ್ಪಲು ನಿವಾಸಿ ರಾಮಕೃಷ್ಣ ಎಂಬುವರ ಮಗಳು 9ನೇ ತರಗತಿ ಮುಗಿಸಿ ರಜೆಯಲ್ಲಿದ್ದ ರಾಣಿ (14) ಮೃತ ಬಾಲಕಿ. ಮೊಬೈಲ್ ಬಳಕೆ ಕಡಿಮೆ ಮಾಡುವಂತೆ ಮನೆಯಲ್ಲಿ ಪೋಷಕರು ಮಗಳಿಗೆ ಬುದ್ದಿವಾದ ಹೇಳಿದ್ದರಿಂದ ರಾಣಿ ಆತ್ಮಹತ್ಯೆ ಮಾಡಿಕೊಂಡಿದ್ದಾಳೆ ಎಂದು ಶಂಕಿಸಲಾಗಿದೆ.
ಸೋಮವಾರ ಸಂಜೆ ಬಾಲಕಿ ಸತ್ಯಮಂಗಲ ಕೆರೆಗೆ ಹಾರಿದ್ದಾಳೆ ಎನ್ನಲಾಗಿದೆ. ರಾಣಿ ಈಗಾಗಲೇ 9ನೇ ತರಗತಿ ಮುಗಿಸಿ ಹತ್ತನೇ ತರಗತಿಗೆ ತೇರ್ಗಡೆ ಹೊಂದಿದ್ದಾಳೆ.
ಸ್ಥಳಕ್ಕೆ ಆಗಮಿಸಿದ ಬಡಾವಣೆ ಪೊಲೀಸರು ಪರಿಶೀಲಿಸಿ ಮುಂದಿನ ತನಿಖೆ ಕೈಗೊಂಡಿದ್ದಾರೆ.