ಕಲಬುರಗಿ ಜಿಲ್ಲೆಯಲ್ಲಿ ಐಸಿಎಂಆರ್ ನಿಂದ 400 ರಕ್ತ ಮಾದರಿ ಸಂಗ್ರಹ

Update: 2020-05-19 17:11 GMT
ಸಾಂದರ್ಭಿಕ ಚಿತ್ರ

ಕಲಬುರಗಿ, ಮೇ 19: ಕೊರೋನ ವೈರಸ್ ಸಮುದಾಯದಲ್ಲಿ ಹರಡಿರಬಹುದಾದ ಸಾಧ್ಯತೆ ಕುರಿತು ಪರಿಶೀಲನೆಗಾಗಿ ಭಾರತೀಯ ವೈದ್ಯಕೀಯ ಸಂಶೋಧನಾ ಪರಿಷತ್(ಐಸಿಎಂಆರ್) ವತಿಯಿಂದ ಕಲಬುರಗಿ ಜಿಲ್ಲೆಯ 400 ಮಂದಿಯ ರಕ್ತದ ಮಾದರಿಗಳನ್ನು ಸಂಗ್ರಹಿಸಲಾಯಿತು.

ಮಂಗಳವಾರ ನಡೆದ ನ್ಯಾಷನಲ್ ಸಿರೋ ಸರ್ವೆಲೆನ್ಸ್ ಫಾರ್ ಕೋವಿಡ್-19 ಸಮೀಕ್ಷೆಯಲ್ಲಿ ಜಿಲ್ಲೆಯ ಹತ್ತು ಸ್ಥಳಗಳನ್ನು ಗುರುತಿಸಿ ಮಾದರಿಗಳನ್ನು ಸಂಗ್ರಹಿಸಲಾಯಿತು.

ಸಮೀಕ್ಷೆಗೆ ಕಂದಾಯ, ಪೊಲೀಸ್, ಆರ್‍ಡಿಪಿಆರ್ ಹಾಗೂ ಆರೋಗ್ಯ ಇಲಾಖೆಗಳು ಸಹಕಾರ ನೀಡಿದ್ದವು. ಜನರಲ್ಲಿ ಕೋವಿಡ್-19 ವೈರಸ್ ಸೋಂಕು ಕುರಿತು ಜಾಗೃತಿ ಮೂಡಿದ್ದು, ಸೋಂಕು ಹರಡದಂತೆ ಅನುಸರಿಸಬೇಕಾದ ಮುಂಜಾಗ್ರತಾ ಕ್ರಮಗಳ ಬಗ್ಗೆ ಸಮುದಾಯದಲ್ಲಿ ಅರಿವು ಮೂಡಿರುವುದು ಸಮೀಕ್ಷೆ ಸಂದರ್ಭದಲ್ಲಿ ಕಂಡು ಬಂದಿದೆ. ವಿಶ್ವ ಆರೋಗ್ಯ ಸಂಸ್ಥೆ ಹಾಗೂ ತಂಡದ ಅಧಿಕಾರಿಗಳು, ಸಮೀಕ್ಷಾ ಕಾರ್ಯಕ್ಕೆ ಕೈಗೊಂಡ ಸಿದ್ಧತಾ ಕ್ರಮಗಳು ಹಾಗೂ ಇಲ್ಲಿನ ವ್ಯವಸ್ಥೆಗೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

ರಕ್ತ ಮಾದರಿ ಸಂಗ್ರಹಕ್ಕೆ ಐಸಿಎಂಆರ್-ಎನ್‍ಐಆರ್‍ಟಿಯ ತಂಡ ಹಾಗೂ ಸ್ಥಳೀಯ ಆರೋಗ್ಯ ಕೇಂದ್ರ ಪ್ರಯೋಗಶಾಲಾ ತಂತ್ರಜ್ಞರನ್ನು ನಿಯೋಜಿಸಲಾಗಿತ್ತು. ಐಸಿಎಂಆರ್ ನ ವಿಜ್ಞಾನಿಗಳು ರಾಜ್ಯ ಮಟ್ಟದ ಸರ್ವೇಕ್ಷಣಾಧಿಕಾರಿಗಳು, ನೋಡಲ್ ಅಧಿಕಾರಿಗಳು, ವಿಶ್ವ ಆರೋಗ್ಯ ಸಂಸ್ಥೆ ಸಲಹೆಗಾರರು ಸಮೀಕ್ಷೆ ಕಾಯಚಟುವಟಿಕೆಯ ಮೇಲುಸ್ತುವಾರಿ ವಹಿಸಿದ್ದರು. ಕಲಬುರಗಿ ತಾಲೂಕಿನ 10 ಗ್ರಾಮಗಳಲ್ಲಿ ಮಾದರಿ ಸಂಗ್ರಹಿಸಲಾಯಿತು ಎಂದು ಜಿಲ್ಲಾಡಳಿತ ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News