×
Ad

ಪೋಷಕರು ಓದಿನ ಕಡೆ ಗಮನ ಹರಿಸು ಎಂದಿದ್ದಕ್ಕೆ ಎಸೆಸೆಲ್ಸಿ ವಿದ್ಯಾರ್ಥಿನಿ ಆತ್ಮಹತ್ಯೆ

Update: 2020-05-19 22:55 IST

ಕೊಳ್ಳೇಗಾಲ, ಮೇ.19: ಪೋಷಕರ ಬುದ್ದಿವಾದದ ಮಾತಿಗೆ ಮನನೊಂದು ಬಾಲಕಿಯೋರ್ವಳು ನೇಣಿಗೆ ಶರಣಾಗಿರುವ ಘಟನೆ ಕೊಳ್ಳೇಗಾಲದಲ್ಲಿ ನಡೆದಿದೆ. 

ಪಟ್ಟಣದ ದೇವಾಂಗಪೇಟೆಯ ಚೌಡೇಶ್ವರಿ ಗುಡಿ ಬೀದಿಯ ನಿವಾಸಿ ಲೋಕೇಶ್ ಎಂಬುವರ ಪುತ್ರಿ ದರ್ಶಿನಿ (17) ಆತ್ಮಹತ್ಯೆ ಮಾಡಿಕೊಂಡ ಬಾಲಕಿ. ಮೊಬೈಲ್ ಹೆಚ್ಚು ಬಳಸಬೇಡ. ಓದಿನ ಕಡೆ ಗಮನ ಹರಿಸು ಎಂಬ ಪೋಷಕರ ಬುದ್ಧಿ ಮಾತಿಗೆ ಮನನೊಂದ ಬಾಲಕಿಯೋರ್ವಳು ನೇಣಿಗೆ ಶರಣಾಗಿದ್ದಾಳೆ ಎಂದು ತಿಳಿದುಬಂದಿದೆ.

ಎಸೆಸೆಲ್ಸಿ ಪರೀಕ್ಷೆ ಹತ್ತಿರವಾಗುತ್ತಿದೆ. ಓದಿಕೊಳ್ಳದೇ ಬಿಟ್ಟು ಬರೀ ಮೊಬೈಲ್ ಹಿಡಿದುಕೊಂಡಿದ್ದೀಯ? ಓದಿಕೋ ಎಂದು ತಿಳಿ ಹೇಳಿದಕ್ಕೆ ಮನನೊಂದ ಬಾಲಕಿ ದರ್ಶಿನಿ ಮನೆಯೊಳಗೆ ಸೀರೆಯಿಂದ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾಳೆ ಎನ್ನಲಾಗಿದೆ.

ಈ ಸಂಬಂಧ ಪಟ್ಟಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಸರ್ಕಾರಿ ಆಸ್ಪತ್ರೆಯಲ್ಲಿ ಮರಣೋತ್ತರ ಪರೀಕ್ಷೆ ನಡೆಸಿ ಬಳಿಕ ಮೃತದೇಹವನ್ನು ಅವರ ವಾರಸುದಾರರಿಗೆ ಒಪ್ಪಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News