ಅಕ್ರಮ ದಾಸ್ತಾನು ಮಾಡಿದ್ದ ಅನ್ನಭಾಗ್ಯ ಯೋಜನೆಯ 254 ಕ್ವಿಂಟಾಲ್ ಅಕ್ಕಿ ಜಪ್ತಿ
Update: 2020-05-20 22:12 IST
ಹಾವೇರಿ, ಮೇ 20: ನಗರದ ಹಾನಗಲ್ ರಸ್ತೆಯಲ್ಲಿರುವ ಎಪಿಎಂಸಿ ಆವರಣದ ಸಿದ್ಧಲಿಂಗೇಶ್ವರ ಟ್ರೇಡರ್ಸ್ ಗೋದಾಮಿನ ಮೇಲೆ ದಾವಣಗೆರೆಯ ಐಜಿ ಸ್ಕ್ವಾಡ್ ಮತ್ತು ಹಾವೇರಿ ಆಹಾರ ಇಲಾಖೆ ಅಧಿಕಾರಿಗಳು ಜಂಟಿ ಕಾರ್ಯಾಚರಣೆ ನಡೆಸಿ, ಅಕ್ರಮವಾಗಿ ದಾಸ್ತಾನು ಮಾಡಿದ್ದ 254 ಕ್ವಿಂಟಾಲ್ ಅಕ್ಕಿಯನ್ನು ಜಪ್ತಿ ಮಾಡಿದ್ದಾರೆ.
ಗೋದಾಮಿನ ಮಾಲಕ ಶಿವಯೋಗಿ ಪಟ್ಟಣಶೆಟ್ಟಿ, ಸಹಾಯಕ ರವಿ ನಾಗನೂರ ಹಾಗೂ ಲಾರಿ ಚಾಲಕ ಶಿವ ಕರುಗಲ್ ಎಂಬುವರನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. 3.80 ಲಕ್ಷ ಮೌಲ್ಯದ ‘ಅನ್ನಭಾಗ್ಯ’ ಅಕ್ಕಿಯನ್ನು ವಶಪಡಿಸಿಕೊಳ್ಳಲಾಗಿದ್ದು, ಇಲ್ಲಿನ ಹಾವೇರಿ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.