ಪ.ಬಂಗಾಳಕ್ಕೆ ಅಪ್ಪಳಿಸಿದ ಅಂಫಾನ್

Update: 2020-05-20 17:30 GMT

ಇತ್ತೀಚಿನ ವರ್ಷಗಳಲ್ಲಿ ಬಂಗಾಳ ಕೊಲ್ಲಿಯಲ್ಲಿ ರೂಪುಗೊಂಡ ಅತ್ಯಂತ ಭೀಕರ ಚಂಡಮಾರುತಗಳಲ್ಲೊಂದಾಗಿರುವ ‘ಅಂಫಾನ್’ ಬುಧವಾರ ಸಂಜೆ ಒಡಿಶಾದಿಂದ ಪಶ್ಚಿಮ ಬಂಗಾಳದ ಸುಂದರಬನ್ಸ್‌ನತ್ತ ಸಾಗಿ ಅಪ್ಪಳಿಸಿದ್ದು, ಕೋಲ್ಕತಾ ಮತ್ತು ಆಸುಪಾಸಿನ ಪ್ರದೇಶಗಳಲ್ಲಿ ಪ್ರತಿ ಗಂಟೆಗೆ 100 ಕಿ.ಮೀ.ಗೂ ಅಧಿಕ ವೇಗದ ಗಾಳಿಯೊಂದಿಗೆ ಭಾರೀ ಮಳೆಯಾಗುತ್ತಿದೆ. 30 ಕಿ.ಮೀ.ವ್ಯಾಸ ಹೊಂದಿರುವ,ಚಂಡಮಾರುತದ ಕೇಂದ್ರಬಿಂದು ನೆಲವನ್ನು ಸ್ಪರ್ಶಿಸಿದೆ ಎಂದು ಭಾರತೀಯ ಹವಾಮಾನ ತಿಳಿಸಿದೆ. ಪ.ಬಂಗಾಳದ ಪೂರ್ವ ಮಿಡ್ನಾಪುರ ಮತ್ತು ಉತ್ತರ 24 ಪರಗಣಗಳ ಜಿಲ್ಲೆಗಳಲ್ಲಿಯೂ ಭಾರೀ ಮಳೆಯಾಗುತ್ತಿದೆ. ಹೌರಾ, ಕೋಲ್ಕತಾ ಮತ್ತು ಹೂಗ್ಲಿಗಳಲ್ಲಿ ಪ್ರತಿ ಗಂಟೆಗೆ 110ರಿಂದ 120 ಕಿ.ಮೀ.ವೇಗದ ಗಾಳಿ ಬೀಸುತ್ತಿದ್ದು, ಹಲವಾರು ಮರಗಳು, ವಿದ್ಯುತ್ ಕಂಬಗಳು ನೆಲಕ್ಕುರುಳಿವೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor