ಪ್ರೊ.ಭಗವಾನ್ 'ರಾಮಮಂದಿರ ಏಕೆಬೇಡ' ಕೃತಿಗೆ ಅಮರಮ್ಮ ಶ್ರೀಚನ್ನಬಸಪ್ಪ ಬೆಟ್ಟದೂರು ಪ್ರಶಸ್ತಿ

Update: 2020-05-20 18:01 GMT

ಮೈಸೂರು,ಮೇ.20: ಖ್ಯಾತ ಸಾಹಿತಿ ಪ್ರೊ.ಕೆ.ಎಸ್.ಭಗವಾನ್ ಅವರ “ರಾಮಮಂದಿರ ಏಕೆಬೇಡ” ಎಂಬ ವೈಚಾರಿಕ ಕೃತಿಗೆ ಕೊಪ್ಪಳದ ಶ್ರೀಮತಿ ಅಮರಮ್ಮ ಶ್ರೀ ಚನ್ನಬಸಪ್ಪ ಬೆಟ್ಟದೂರು ಪ್ರತಿಷ್ಠಾನದ ವತಿಯಿಂದ ಪ್ರಶಸ್ತಿ ಲಭಿಸಿದೆ.

ಕೊಪ್ಪಳದ ಶ್ರೀಮತಿ ಅಮರಮ್ಮ ಶ್ರೀ ಚನ್ನಬಸಪ್ಪ ಬೆಟ್ಟದೂರು ಪ್ರತಿಷ್ಠಾನವು ವೈಚಾರಿಕ ಸಾಹಿತ್ಯ ಹಾಗೂ ವಚನ ಸಾಹಿತ್ಯದ ಅತ್ಯುತ್ತಮ ಪುಸ್ತಕಗಳನ್ನು ಆಯ್ಕೆಗಾಗಿ ಕಳುಹಿಸಲಾಗಿತ್ತು. ಒಟ್ಟು 16 ಪುಸ್ತಕಗಳು ಆಯ್ಕೆಗೆ ಬಂದಿದ್ದು ಮಹಾಂತಪ್ಪ ನಂದೂರ ಹುಬ್ಬಳಿ ಅವರ “ಅರಿವೇ ಪ್ರಮಾಣ” ಅಕ್ಕನಾಗಮ್ಮ ಜೀವನ ಕಾವ್ಯ ಹಾಗೂ ಪ್ರೊ.ಕೆ.ಎಸ್.ಭಗವಾನ್ ಮೈಸೂರು ಅವರ”ರಾಮಮಂದಿರ ಏಕೆಬೇಡ” ಎಂಬ ವೈಚಾರಿಕ ಕೃತಿಗೆ ತಲಾ ಐದು ಸಾವಿರ ಮೊತ್ತದ ಪ್ರಶಸ್ತಿ ಹಣವಿದ್ದು, ಇದೇ ಜೂನ್ 13 ರಂದು ಪ್ರಶಸ್ತಿ ಪ್ರಧಾನ ಸಮಾರಂಭ ಮಾನ್ವಿಯಲ್ಲಿ ನಡೆಯಬೇಕಿತ್ತಾದರೂ ಕೊರೋನಾ ಸೋಂಕಿನಿಂದಾಗಿ ಪ್ರಶಸ್ತಿಯನ್ನು ಮುಂದಿನ ವರ್ಷ ಪ್ರಧಾನ ಮಾಡಲಾಗುವುದು ಎಂದು ಪ್ರತಿಷ್ಠಾನ ಪ್ರಕಟಣೆಯಲ್ಲಿ ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News