ಮೇ 21ರಂದು 2,732 ಕೆಎಸ್ಆರ್‌ಟಿಸಿ ಬಸ್ಸುಗಳ ಕಾರ್ಯಾಚರಣೆ: 85,373 ಪ್ರಯಾಣಿಕರು ರಾಜ್ಯದ ವಿವಿಧೆಡೆ ಸಂಚಾರ

Update: 2020-05-21 16:42 GMT

ಬೆಂಗಳೂರು, ಮೇ 21: ಕೆಎಸ್ಸಾರ್ಟಿಸಿಯ ನಾಲ್ಕು ವಿಭಾಗಳಿಂದ ಮೇ 21ರಂದು 2,732 ಬಸ್‍ಗಳು ರಾಜ್ಯಾದ್ಯಂತ ಕಾರ್ಯಾಚರಣೆ ಮಾಡಿದ್ದು, ಒಟ್ಟು 85,373 ಪ್ರಯಾಣಿಕರು ವಿವಿಧೆಡೆ ಸಂಚರಿಸಿದ್ದಾರೆ. ಕಳೆದ ಮೂರು ದಿನದಿಂದ ಇಲ್ಲಿಯವರೆಗೂ 2,20,472 ಮಂದಿ ಪ್ರಯಾಣಿಸಿದ್ದಾರೆ.

ಬೆಂಗಳೂರಿನಿಂದ ಮೇ 21ರಂದು 847 ಬಸ್ಸುಗಳು ಹಾಗೂ 11,844 ಪ್ರಯಾಣಿಕರು ರಾಜ್ಯದ ವಿವಿಧ ಜಿಲ್ಲೆಗಳಾದ ಬಾಗಲಕೋಟೆ, ಬಳ್ಳಾರಿ, ಬೆಳಗಾವಿ, ಚಿಕ್ಕಮಗಳೂರು, ಚಿತ್ರದುರ್ಗ, ದಾವಣಗೆರೆ, ಧಾರವಾಡ, ಗದಗ, ಕಲಬುರಗಿ, ಕೊಪ್ಪಳ, ಹಾಸನ, ಹುಬ್ಬಳ್ಳಿ, ಕಾರವಾರ, ಕೋಲಾರ, ಮಂಗಳೂರು, ಮಡಿಕೇರಿ, ಮೈಸೂರು, ರಾಯಚೂರು, ಶಿವಮೊಗ್ಗ, ಯಾದಗಿರಿಗೆ ಪ್ರಯಾಣಿಸಿದ್ದಾರೆ.

ಪ್ರಯಾಣಿಕರು ಮುಂಗಡ ಟಿಕೇಟ್ ಕಾಯ್ದಿರಿಸುವುದರಿಂದ ಬಸ್ ನಿಲ್ದಾಣದಲ್ಲಿ ಜನ ಸಂದಣಿ ಮತ್ತು ಸರತಿ ಸಾಲುಗಳಲ್ಲಿ ಕಾಯುವುದನ್ನು ತಪ್ಪಿಸಬಹುದಾಗಿದೆ. ಹೀಗಾಗಿ ಪ್ರಯಾಣಿಕರು ಕೆಎಸ್ಸಾರ್ಟಿಸಿ www.ksrtc.in ಮೂಲಕ ಅಥವಾ ನಿಗಮದ ಟಿಕೆಟ್ ಕೌಂಟರ್‍ಗಳು, ಫ್ರಾಂಚೈಸಿ ಕೌಂಟರ್ ಗಳ ಮೂಲಕ ಟಿಕೆಟ್‍ಗಳನ್ನು ಕಾಯ್ದಿರಿಸಬಹುದಾಗಿದೆ ಎಂದು ಕೆಎಸ್ಸಾರ್ಟಿಸಿ ಪ್ರಕಟನೆಯಲ್ಲಿ ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News