ಕೊಪ್ಪ: ಕೊರೋನ ವಾರಿಯರ್‌ ಡಾ.ಹರೀಶ್ ಕುಮಾರ್ ಗೆ ಸನ್ಮಾನ

Update: 2020-05-23 05:44 GMT

ಕೊಪ್ಪ, ಮೇ.22: ಕೋರೋನ ವಾರಿಯರ್ ಆಗಿ ಸೇವೆ ಸಲ್ಲಿಸುತ್ತಿರುವ ಡಾ.ಹರೀಶ್ ಕುಮಾರ್ ಅವರನ್ನು ಸಂವಿಧಾನ ಸಂರಕ್ಷಣಾ ವೇದಿಕೆಯ ವತಿಯಿಂದ ಸನ್ಮಾನಿಸಲಾಯಿತು.

ಪಟ್ಟಣದದಲ್ಲಿ ಕ್ಲಿನಿಕ್ ವೊಂದರಲ್ಲಿ ವೈದ್ಯರಾಗಿ ಸೇವೆ ಮಾಡುತ್ತಿರುವ ಡಾ.ಹರೀಶ್ ಕುಮಾರ್ ರವರು ತಾಲೂಕು ಆರೋಗ್ಯ ಇಲಾಖೆಯ ನಿರ್ದೇಶನದಂತೆ ತಾಲೂಕಿನ ಹಲವಾರು ಹಳ್ಳಿಗಳಲ್ಲೂ ವೈದ್ಯಕೀಯ ಸೇವೆ ನೀಡುತ್ತಿದ್ದಾರೆ. ಇತ್ತೀಚೆಗೆ ಅವರು ಕೋವಿಡ್-19 ವಾರಿಯರ್ ಆಗಿ ತಮ್ಮನ್ನು ತೊಡಗಿಸಿಕೊಂಡು ಸೇವೆ ಸಲ್ಲಿಸುತ್ತಿದ್ದು, ಈ ಸಂದರ್ಭ ಕೋರೋನ ಪರೀಕ್ಷೆಗೆ ಒಳಪಟ್ಟವರ ಮೂವರ ಫಲಿತಾಂಶ ಪಾಸಿಟಿವ್ ಬಂದಿದೆ. ಇದರಿಂದ ಡಾ.ಹರೀಶ್ ಕುಮಾರ್ ರವರ ಬಗ್ಗೆ ಪಟ್ಟಣದಾದ್ಯಂತ ವಂದಂತಿಗಳು ಹಬ್ಬಿಕೊಂಡಿತ್ತು. ಅದರಿಂದ ಸ್ವತಃ ಅವರು ಕೋವಿಡ್ ಪರೀಕ್ಷೆಗೆ ಒಳಗಾಗಿ ಕೆಲವು ದಿನಗಳ ಕಾಲ ಹೋಂ ಕ್ವಾರಂಟೈನ್ ಗೆ ಒಳಗಾಗಿದ್ದರು. ಅದರ ಫಲಿತಾಂಶ ಇಂದು ನೆಗಟಿವ್ ಬಂದಿದೆ.

ಮೂಲತ ಉಡುಪಿ ಜಿಲ್ಲೆಯ ಕರಂಬಳ್ಳಿ ನಿವಾಸಿಗಳಾದ ಭಾಸ್ಕರ್ ರಾವ್ ಮತ್ತು ಅರುಣ ದಂಪತಿಗಳ ದ್ವಿತೀಯ ಪುತ್ರರಾದ ಇವರು ಕೊಪ್ದದ ಆರೂರು ಲಕ್ಷ್ಮಿ ನಾರಾಯಣ ರಾವ್ ಆಯುರ್ವೇದ ಆಸ್ಪತ್ರೆಯಲ್ಲಿ ವೈದ್ಯಕೀಯ ಶಿಕ್ಷಣ ಪಡೆದು ಕೊಪ್ಪದಲ್ಲಿಯೆ ವೈದ್ಯರಾಗಿದ್ದಕೊಂಡು ಸೇವೆ ಸಲ್ಲಿಸುತ್ತಿದ್ದಾರೆ. ಸದ್ಯ ಕೋರೋನ ವಾರಿಯರ್ ಆಗಿ ಸೇವೆ ಸಲ್ಲಿಸುತ್ತಿರುವ ಇವರ ಸೇವೆಯನ್ನು ಪರಿಗಣಿಸಿ ಸಂವಿಧಾನ ಸಂರಕ್ಷಣಾ ವೇದಿಕೆಯ ಪರವಾಗಿ ಅಭಿನಂದಿಸಲಾಯಿತು.

ಈ ಸಂದರ್ಭದಲ್ಲಿ ವೇದಿಕೆಯ ಅಧ್ಯಕ್ಷ ಅಬ್ದುಲ್ ಝಹೀರ್, ಪಟ್ಟಣ ಪಂಚಾಯತ್ ಸದಸ್ಯ ಅಬ್ದುಲ್ ರಶೀದ್, ಸಾದಿಕ್ ನಝೀರ್, ಅಬ್ದುಲ್ ಝಾವಿದ್, ಝುಬೇರ್ ಅಹಮದ್, ಮಹಮ್ಮದ್ ಹನೀಪ್ ಮೊದಲಾದವರು ಇದ್ದರು

Full View

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News