ರವಿವಾರ ರಾಜ್ಯವ್ಯಾಪಿ ಸಂಪೂರ್ಣ ಲಾಕ್‍ಡೌನ್: ಏನಿರುತ್ತೆ ? ಏನಿರಲ್ಲ ? ಇಲ್ಲಿದೆ ಮಾಹಿತಿ

Update: 2020-05-23 14:29 GMT
ಸಾಂದರ್ಭಿಕ ಚಿತ್ರ

ಬೆಂಗಳೂರು, ಮೇ 23: ಕೊರೋನ ಸೋಂಕು ತಡೆಗಟ್ಟುವ ನಿಟ್ಟಿನಲ್ಲಿ ರಾಜ್ಯ ವ್ಯಾಪ್ತಿಯಲ್ಲಿ ಸಂಪೂರ್ಣ ಲಾಕ್‍ಡೌನ್ ನಾಳೆ(ರವಿವಾರ) ಜಾರಿಯಲ್ಲಿದ್ದು, ಅಗತ್ಯ ಸೇವೆಗಳನ್ನು ಹೊರತುಪಡಿಸಿ ಉಳಿದ ಎಲ್ಲ ಚಟುವಟಿಕೆಗಳಿಗೆ ತಡೆ ನೀಡಲಾಗಿದೆ. ಇನ್ನು, ಜನರ ಸಂಚಾರವೂ ಪೂರ್ಣ ಪ್ರಮಾಣದಲ್ಲಿ ಸ್ತಬ್ಧಗೊಳ್ಳಲಿದೆ.

ತುರ್ತು ಆರೋಗ್ಯ ಸೇವೆಗಳನ್ನು ಪಡೆಯಲು ಯಾವುದೇ ರೀತಿಯ ಕಡಿವಾಣ ಇಲ್ಲ. ಅದೇ ರೀತಿ, ನಿಗದಿ ಆಗಿರುವ ಮದುವೆ ಸಮಾರಂಭಗಳನ್ನು ವಿಶೇಷ ಪ್ರಕರಣ ಎಂದು ಪರಿಗಣಿಸಿ, ಸುರಕ್ಷಿತ ಅಂತರ ಕಾಯ್ದುಕೊಂಡು 50 ಜನರ ಸಂಖ್ಯೆಯಲ್ಲಿ ಸರಳ ವಿವಾಹ ಕಾರ್ಯಕ್ರಮಕ್ಕೂ ಅನುಮತಿ ದೊರೆತಿದೆ.

ದ್ವಿಚಕ್ರ ವಾಹನ, ಆಟೊ, ಟ್ಯಾಕ್ಸಿ ಹಾಗೂ ಕೆಎಸ್ಸಾರ್ಟಿಸಿ, ಬಿಎಂಟಿಸಿ ಬಸ್ಸುಗಳ ಸಂಚಾರಕ್ಕೂ ನಿರ್ಬಂಧ ಹೇರಲಾಗಿದ್ದು, ಖಾಸಗಿ ವಾಹನಗಳ ಓಡಾಟ ಸಂಪೂರ್ಣ ನಿಲ್ಲಲಿದೆ. ರವಿವಾರವೂ ಕೆಲಸ ನಿರ್ವಹಿಸುತ್ತಿದ್ದ ಖಾಸಗಿ ಸಂಸ್ಥೆಗಳ ನೌಕರರಿಗೆ ರಜೆ ದಿನವನ್ನಾಗಿ ಘೋಷಣೆ ಮಾಡಲಾಗಿದೆ.

ಏಕೆ ಲಾಕ್‍ಡೌನ್: ಕೊರೋನ ವೈರಸ್ ತಡೆಗಟ್ಟುವ ನಿಟ್ಟಿನಲ್ಲಿ ದೇಶ ವ್ಯಾಪ್ತಿಯಲ್ಲಿ ಮೇ 31ರವರೆಗೂ ಲಾಕ್‍ಡೌನ್ 4.0 ಚಾಲ್ತಿಯಲ್ಲಿದ್ದು, ಕೆಂಪು ವಲಯ ಹೊರತು ಪಡಿಸಿ, ಉಳಿದ ಪ್ರದೇಶಗಳಲ್ಲಿ ಕೆಲ ನಿಯಮಗಳನ್ನು ಸಡಿಲಗೊಳಿಸಲಾಗಿದೆ. ಆದರೆ, ರವಿವಾರ ಮಾತ್ರ ಪೂರ್ಣ ಪ್ರಮಾಣದಲ್ಲಿ ಲಾಕ್‍ಡೌನ್ ಇರಲಿದ್ದು, ಸೋಮವಾರ ಬೆಳಗ್ಗೆ 7 ಗಂಟೆವರೆಗೂ ಕರ್ಫ್ಯೂ ಜಾರಿಯಲ್ಲಿದೆ.

ಬಿಎಂಟಿಸಿ ಸೇವೆ ಇಲ್ಲ

ಇಂದು ಕರ್ಫ್ಯೂ ಜಾರಿ ಹಿನ್ನೆಲೆ ಬಿಎಂಟಿಸಿ ಬಸ್ ಸಂಚಾರ ನಿಲ್ಲಿಸಲಾಗಿದ್ದು, ಸಾರ್ವಜನಿಕರಿಗೆ ಹೊರತು ಪಡಿಸಿ, ಅಗತ್ಯ ಸೇವೆಯಲ್ಲಿ ಕಾರ್ಯ ನಿರ್ವಹಿಸುವವರಿಗೆ ಹಾಗೂ ವಿಶೇಷ ಅಗತ್ಯ ಸೇವೆಗಳನ್ನು ಮಾತ್ರ ಲಭ್ಯ ಇರಲಿದೆ ಎಂದು ಬಿಎಂಟಿಸಿ ಪ್ರಕಟನೆ ತಿಳಿಸಿದೆ.

ಏನಿರುತ್ತೆ ?

► ಹಾಲು, ತರಕಾರಿ, ಹಣ್ಣು, ದಿನಸಿ ಅಂಗಡಿಗಳು ತೆರೆದಿರುತ್ತದೆ

►ಔಷಧಿ ಅಂಗಡಿ

►ಆಸ್ಪತ್ರೆ, ಕ್ಲಿನಿಕ್‍ಗಳು

►ಪೆಟ್ರೋಲ್ ಬಂಕ್

►ಆಂಬ್ಯುಲೆನ್ಸ್ ಸೇವೆ

ಓಡಾಟಕ್ಕೆ ಅನುಮತಿ ಇರುವವರು

► ಗರ್ಭಿಣಿ ಸ್ತ್ರೀಯರು ಆಸ್ಪತ್ರೆಗೆ ತೆರಳಲು

►ಆಂಬ್ಯುಲೆನ್ಸ್ ಸೇವೆ

►ಡಯಾಲಿಸಿಸ್ ಸೇರಿದಂತೆ ಇನ್ನಿತರೆ ಆರೋಗ್ಯ ಸೇವೆಗಳನ್ನು ಪಡೆಯಬಹುದು

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News