ಒಂದೆ ದಿನ 14 ಪಾಸಿಟಿವ್, ಸೆಂಚೂರಿಗೆ 1 ಬಾಕಿ

Update: 2020-05-24 10:40 GMT

ಹಾಸನ, ಮೇ 24: ಜಿಲ್ಲೆಯಲ್ಲಿ ಒಂದೆ ದಿನ 14 ಕೋವಿಡ್  -೧೯ ಪಾಸಿಟಿವ್ ಪ್ರಕರಣ ಪತ್ತೆಯಾಗಿದ್ದು  ಇಲ್ಲಿವರೆಗೂ 99 ಪಾಸಿಟಿವ್ ಪ್ರಕರಣ ದಾಖಲಾಗಿದ್ದು, ನೂರರ ಗಡಿ ದಾಟಲು ಇನ್ನೊಂದು ಪಾಸಿಟಿವ್ ಮಾತ್ರ ಬಾಕಿ ಉಳಿದಿದೆ. ಇವರಲ್ಲಿ ಇಬ್ಬರು ಸ್ಥಳೀಯರಿಗೆ ಪಾಸಿಟಿವ್ ಇರುವುದರಿಂದ ಹಾಸನ ನಗರದ ಎರಡು ಏರಿಯಾಗಳು 28 ದಿವಸ ಸಂಪೂರ್ಣ ಸೀಲ್ ಡೌನ್ ಜಾರಿಗೆ ತರಲಾಗಿ, ದಿನಸಿ ವಸ್ತು ಸೇರಿದಂತೆ ಎಲ್ಲಾವನ್ನು ಮನೆಗೆ ತಲುಪಿಸುವ ಕೆಲಸ ಜಿಲ್ಲಾಡಳಿತ ಮಾಡಲಿದೆ.

ಕಳೆದ ಎರಡು ತಿಂಗಳಿನಿಂದ ಸುರಕ್ಷವಾಗಿದ್ದ ಹಾಸನ ಜಿಲ್ಲೆಯಲ್ಲಿ  ಕಳೆದ ಎರಡು ವಾರಗಳಿಂದ ಕೊರೋನಾ ಪಾಸಿಟಿವ್ ಪ್ರಕರಣ ಹೆಚ್ಚಾಗುತ್ತಲೆ ಇರುವುದು ಸಾರ್ವಜನಿಕರಲ್ಲಿ ಆತಂಕ ಮೂಡಿಸಿದೆ. ಹಾಸನ ನಗರದ ಬಿ. ಕಾಟೀಹಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿ ಮತ್ತು ನಗರ ಸಭೆ ವ್ಯಾಪ್ತಿಯ ಅರಳೀಕಟ್ಟೆ ವೃತ್ತದ ಬಳಿ ಇರುವ ಉತ್ತರ ಬಡಾವಣೆ ರಸ್ತೆ ಬಳಿ ವಾಸವಾಗಿರುವ ಇಬ್ಬರಿಗೆ ಪಾಸಿಟಿವ್ ಬಂದಿರುವ ಹಿನ್ನಲೆಯಲ್ಲಿ ಈ ಏರಿಯಾವನ್ನು ಸಂಪೂರ್ಣ ಸೀಲ್ ಡೌನ್ ಮಾಡಲಾಗಿದೆ. ಈ ಎರಡು ಏರಿಯಾವನ್ನು ಕಂಟೈನ್ ಮೆಂಟ್ ಝೋನ್ಗಳೆಂದು ಘೋಷಣೆ ಮಾಡಲಾಗಿದೆ. ಪಾಸಿಟಿವ್ ಬಂದವರು ಮನೆಗೆ ಬಂದು ಹೋಗಿರುವುದರಿಂದ ಈ ಭಾಗದಲ್ಲಿ ಕಟ್ಟುನಿಟ್ಟಿನ ನಿಗಾವಹಿಸಲಾಗಿದೆ. ದಿನಸಿ ಪದಾರ್ಥ, ಔಷಧಿ, ತರಕಾರಿ ಇತರೆ ವಸ್ತುಗಳು ಬೇಕಾದಲ್ಲಿ ಜಿಲ್ಲಾಡಳಿತ ವ್ಯವಸ್ಥೆ ಮಾಡಿದ್ದು, ಈಗಾಗಲೇ ನಗರ ಸಭೆ ವತಿಯಿಂದ ಈ ಎರಡು ಏರಿಯಾಗಳಲ್ಲಿ ಔಷಧಿ ಸಿಂಪಡಿಸಲಾಗಿದೆ. ವಾಸವಿದ್ದ ಕುಟುಂಬದವರನ್ನು ತುರ್ತು ವಾಹನದಲ್ಲಿ ಸುರಕ್ಷಿತವಾಗಿ ಕೊಂಡೂಯ್ಯಲಾಯಿತು.
ಜಿಲ್ಲಾಧಿಕಾರಿ ಆರ್. ಗಿರೀಶ್ ಮಾತನಾಡಿ, ಕೆಮ್ಮು, ಜ್ವರ ಇದ್ದುದರಿಂದ ಕೋವಿಡ್ ಆಸ್ಪತ್ರೆಗೆ ಸೇರಿಸಲಾಗಿತ್ತು. ಪರೀಕ್ಷೆ ಮಾಡಿದಾಗ ಕೊರೋನಾ ಪಾಸಿಟಿವ್ ಇರುವುದು ಬೆಳಕಿಗೆ ಬಂದಿದೆ. ಅಗತ್ಯ ವಸ್ತುಗಳನ್ನು ಕೊಂಡುಕೊಳ್ಳಲು ನಮ್ಮ ಸಿಬ್ಬಂದಿ ಬರಲಿದ್ದಾರೆ. ಸಾರ್ವಜನಿಕರು ಗಾಬರಿಪಡುವ ಅವಶ್ಯಕತೆ ಇಲ್ಲ  ಎಂದು ಮನವಿ ಮಾಡಿದರು.

ನಗರಸಭೆ ವ್ಯಾಪ್ತಿಯ 14ನೇ ವಾರ್ಡಿನ ಅರಳೀಕಟ್ಟೆ ವೃತ್ತದ ಬಳಿ ಇರುವ ಉತ್ತರ ಬಡಾವಣೆಯ ಸೀಲ್ ಡೌನ್. ಅವಶ್ಯಕತೆ ಇದ್ದಲ್ಲಿ ದುಬ್ಬೇಗೌಡ ಮೊ. 9731504899 ಮತ್ತು ಜಗದಾಂಬ ಮೊ. 9606349246 ಇವರನ್ನು ಮೊಬೈಲ್ ಕರೆ ಮಾಡಿ ಸಂಪರ್ಕಿಸಬಹುದಾಗಿದೆ ಎಂದು ನಗರಸಭೆ ಆಯುಕ್ತರಾದ ಕೃಷ್ಣಮೂರ್ತಿ ತಿಳಿಸಿದ್ದಾರೆ.

ಬಿ. ಕಾಟೀಹಳ್ಳಿ ಗ್ರಾಮಾ ಪಂಚಾಯಿತಿ ವ್ಯಾಪ್ತಿಯ ನಿವಾಸೊ ಕೆ.ಎಸ್.ಆರ್.ಪಿ.ಯಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಓರ್ವ ಪೊಲೀಸ್ ಪೆದೆಗೂ ಕೊರೋನಾ ಸೋಂಕು ಹರಿಡಿರುವುದು ದೃಡ ಪಟ್ಟಿರುವುದರಿಂದ ಈ ಏರಿಯಾವನ್ನು ಕೂಡ ಸೀಲ್ ಡೌನ್ ಮಾಡಲಾಗಿದೆ ಎಂದು ಜಿಲ್ಲಾಧಿಕಾರಿ ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News