×
Ad

ಕಲಬುರಗಿ: ಸರಳ ರೀತಿಯಲ್ಲಿ ಈದುಲ್ ಫಿತ್ರ್ ಆಚರಣೆ

Update: 2020-05-25 11:24 IST

ಕಲಬುರಗಿ: ಕೊರೋನ ಮಹಾಮಾರಿ ಹಿನ್ನೆಲೆಯಲ್ಲಿ ಸರ್ಕಾರದ ನಿರ್ಭಂದದ ಮಧ್ಯೆ ಮುಸ್ಲಿಮರು ಪವಿತ್ರ ಈದುಲ್ ಫಿತ್ರ್ ಅನ್ನು ಸರಳ ರೀತಿಯಲ್ಲಿ ಮನೆಯಲ್ಲೇ ಇದ್ದು ವಿಶೇಷ ಪ್ರಾರ್ಥನೆ ಸಲ್ಲಿಸಿ ಆಚರಿಸಿದರು.

ಹೊಸ ಬಟ್ಟೆ, ಉಡುಗೆ ತೊಡುಗೆಗಳಿಲ್ಲದೆ, ಸಾಮೂಹಿಕ ಪ್ರಾರ್ಥನೆ ಸಲ್ಲಿಸದೆ ಎಲ್ಲರೂ ತಮ್ಮ ತಮ್ಮ ಮನೆಯಲ್ಲಿ ವಿಶೇಷ ಆಹಾರ ಪದಾರ್ಥಗಳನ್ನು ತಯಾರಿಸಿ ಮನೆಯವರ ಜೊತೆ ಈದ್ ಆಚರಿಸಿದರು. ಪರಸ್ಪರ ಹಸ್ತಲಾಘವ, ಅಪ್ಪುಗೆ ಇಲ್ಲದೆ ಎಲ್ಲರೂ ಶುಭ್ರವಾದ ಬಟ್ಟೆ ಧರಿಸಿ ಪರಸ್ಪರ ಶುಭಾಶಯ ಹೇಳಿ ಸಂಭ್ರಮಿಸಿದರು.

ಕಲಬುರಗಿಯ ಈದ್ಗಾ ಮೈದಾನ ಸಾಮೂಹಿಕ ಪ್ರಾರ್ಥನೆ ಇಲ್ಲದೆ ಬಿಕೋ ಎನ್ನುತ್ತಿತ್ತು. ಮುಂಜಾಗ್ರತಾ ಕ್ರಮವಾಗಿ ಪೊಲೀಸರು ಸೂಕ್ತ ಬಿಗಿ ಬಂದೋಬಸ್ತ್ ಒದಗಿಸಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News