ಕೃಷಿ ಉತ್ಪನ್ನಗಳ ಖರೀದಿ ಹೇಳಿಕೆಗಷ್ಟೇ ಸೀಮಿತ: ಸರಕಾರದ ವಿರುದ್ಧ ಕಾಂಗ್ರೆಸ್ ಆಕ್ರೋಶ

Update: 2020-05-25 15:06 GMT

ಬೆಂಗಳೂರು, ಮೇ 25: 'ಬೆಳೆದ ಕೃಷಿ ಉತ್ಪನ್ನಗಳನ್ನು ಕೊರೋನ ಲಾಕ್‍ಡೌನ್‍ನಿಂದಾಗಿ ಮಾರಾಟ ಮಾಡಲಾಗದೆ, ಬೆಲೆಯೂ ಸಿಗದೆ ತಾವೇ ಬೆಳೆದ ಬೆಳೆಯನ್ನು ನಾಶಪಡಿಸುವಂತಹ ದಯನೀಯ ಸ್ಥಿತಿಯಲ್ಲಿರುವ ರೈತರಿಗೆ ಮುಖ್ಯಮಂತ್ರಿ ಯಡಿಯೂರಪ್ಪ ಸರಕಾರದಿಂದ ಯಾವುದೇ ನೆರವು ದೊರೆಯುತ್ತಿಲ್ಲ' ಎಂದು ಕೆಪಿಸಿಸಿ ಆಕ್ರೋಶ ಹೊರಹಾಕಿದೆ.

ಕಾಂಗ್ರೆಸ್ ಸೇರಿದಂತೆ ವಿರೋಧ ಪಕ್ಷಗಳ ಒತ್ತಡದ ನಂತರವೂ ರೈತರಿಂದ ಹಣ್ಣು-ತರಕಾರಿಗಳನ್ನು ಖರೀದಿಸುವುದಾಗಿ ಸರಕಾರ ಹೇಳಿಕೆ ನೀಡಿದರೂ ಅದು ಕೇವಲ ಹೇಳಿಕೆಯಾಗಿಯೇ ಉಳಿದಿದೆ. ಹೀಗಾಗಿ ಸರಕಾರ ಕೂಡಲೇ ರೈತರ ಕೃಷಿ ಉತ್ಪನ್ನಗಳ ಖರೀದಿಗೆ ಕ್ರಮ ಕೈಗೊಳ್ಳಬೇಕು ಎಂದು ಕಾಂಗ್ರೆಸ್ ಟ್ವೀಟ್ಟರ್ ಮೂಲಕ ಆಗ್ರಹಿಸಿದೆ.

ನಿಮ್ಮ ಬದ್ಧತೆ ತೋರಿಸಿ: ಶಿಕ್ಷಣ ಸಚಿವ ಸುರೇಶ್ ಕುಮಾರ್ ಅವರೇ ಎಲ್ಲ ವಿಷಯಗಳಲ್ಲಿ ಬಹಳ ನಾಟಕೀಯವಾಗಿ ವರ್ತಿಸುವ ತಾನು ಅನುಮತಿ ಇಲ್ಲದೆ ಪದವಿ ಪೂರ್ವ ಕಾಲೇಜು ನಡೆಸುತ್ತಿರುವ ಬಗ್ಗೆ ಎಸೆಸೆಲ್ಸಿ ಪರೀಕ್ಷೆಗಳೇ ನಡೆಯದೆ ಪ್ರಥಮ ಪಿಯುಸಿಗೆ ದಾಖಲಾತಿ ನಡೆಸುತ್ತಿರುವ ಬಗ್ಗೆ ಯಾವ ಕ್ರಮ ಜರುಗಿಸುವಿರೀ? ಅಕ್ರಮ ನಡೆಸುತ್ತಿರುವ ಕಾಲೇಜುಗಳ ಪರವಾನಗಿ ರದ್ದುಪಡಿಸಿ ನಿಮ್ಮ ಬದ್ಧತೆ ತೋರಿಸಿ' ಎಂದು ಕಾಂಗ್ರೆಸ್ ಟ್ವಿಟ್ಟರ್ ಮೂಲಕ ಸವಾಲು ಹಾಕಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News