×
Ad

ಮೈಸೂರು: ತಲ್ಲಣ ಮೂಡಿಸಿದ್ದ ಜುಬಿಲಿಯಂಟ್ ಕಂಪನಿ ಕಾರ್ಯರಾಂಭ

Update: 2020-05-25 23:49 IST

ಮೈಸೂರು,ಮೇ.25: ಕೊರೋನ ಹಿನ್ನೆಲೆಯಲ್ಲಿ ಎರಡೂವರೆ ತಿಂಗಳು ಲಾಕ್ ಡೌನ್ ಆಗಿದ್ದ ನಂಜನಗೂಡಿನ ಜುಬಿಲಿಯಂಟ್ ಕಂಪನಿ ಸೋಮವಾರದಿಂದ  ಮತ್ತೆ ತನ್ನ ಕಾರ್ಯರಾಂಭ ಶುರು ಮಾಡಿದೆ.

ಕೊರೋನಕ್ಕಾಗಿ ರೆಮ್ಡಿಸಿವಿರ್ ಔಷಧಿ ಉತ್ಪಾದಿಸಲು ಅನುಮತಿ ಕೇಳಿದ್ದ ಕಾರ್ಖಾನೆ ರಾಜ್ಯ ಸರ್ಕಾರದ ಸೂಚನೆ ಮೇರೆಗೆ ಈಗ ಮತ್ತೆ ಕಾರ್ಯರಂಭ ಮಾಡಿದೆ. 10 ಗ್ರಾಮಗಳ ದತ್ತು, 50 ಸಾವಿರ ಕಿಟ್, ಭವಿಷ್ಯದಲ್ಲಿ ದೋಷ ಎಸಗಲ್ಲ ಎಂಬ ಷರತ್ತುಗಳಿಗೆ ಕಂಪನಿ ಒಪ್ಪಿಗೆ ಸೂಚಿಸಿದೆ.

74 ಕಾರ್ಮಿಕರು ಕೊರೋನ ಪಾಸಿಟಿವ್ ಆಗಿದ್ದು, ಇನ್ನೂ ಪತ್ತೆಯಾಗದ ಸೋಂಕಿನ ಮೂಲ, ಅಪೂರ್ಣ ವರದಿ ನೀಡಿದ್ದ ಐಎಎಸ್ ಅಧಿಕಾರಿ ಹರ್ಷಗುಪ್ತ. ಇದು ಜ್ಯಬಿಲಿಯಂಟ್ ಕಂಪನಿಯಲ್ಲಿ ಪತ್ತೆಯಾದ ಕೊರೋನ ಕೇಸ್ ಗೆ ಸಂಬಂಧಿಸಿದ ಕೆಲ ಪ್ರಮುಖ ಘಟನಾವಳಿಗಳು.

ತಲ್ಲಣ ಮೂಡಿಸಿದ್ದ ಜುಬಿಲಿಯಂಟ್ ಓಪನ್ :
ಸುಮಾರು 60 ದಿನಗಳ ನಂತರ ಬಾಗಿಲು ತೆರೆದ ಕಾರ್ಖಾನೆಯ ಶೇಕಡ 25ರಷ್ಟು ನೌಕರರು ಕೆಲಸಕ್ಕೆ ಹಾಜರಾಗಿದ್ದಾರೆ. ಗೇಟ್ ಮುಂಭಾಗದಲ್ಲೇ ಎಲ್ಲಾ ನೌಕರರ ತಪಾಸಣೆ ನಡೆಸಲಾಗಿದ್ದು, ಥರ್ಮಲ್ ಸ್ಕ್ಯಾನಿಂಗ್, ಸ್ಯಾನಿಟೈಸರ್ ಸಿಂಪಡಣೆ ಮಾಡಲಾಯಿತು. ಪಿಪಿಇ ಕಿಟ್ ಬಳಸಿ ನೌಕರರ ತಪಾಣೆಗೆ ಕಂಪನಿ ಆಡಳಿತ ಮಂಡಳಿ ಮುಂದಾಗಿತ್ತು. ಕಂಪನಿ ಒಳ ಪ್ರವೇಶಕ್ಕೆ ಎಲ್ಲರ ಕೋವಿಡ್ ಟೆಸ್ಟ್ ವರದಿ ಕಡ್ಡಾಯವಾಗಿತ್ತು. ಕಾರ್ಖಾನೆ ಮುಂದೆ 200ಕ್ಕೂ ಹೆಚ್ಚು ನೌಕರರು ಜಮಾಯಿಸಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News