ರಾಜ್ಯದಲ್ಲಿ ಕೊರೋನ ಸೋಂಕಿತರ ಸಂಖ್ಯೆ 2283ಕ್ಕೆ ಏರಿಕೆ

Update: 2020-05-26 14:41 GMT

ಬೆಂಗಳೂರು: ರಾಜ್ಯದಲ್ಲಿ ಸೋಮವಾರ ಸಂಜೆ 5 ಗಂಟೆಯಿಂದ ಮಂಗಳವಾರ ಸಂಜೆ 5 ಗಂಟೆರ ಅವಧಿಯಲ್ಲಿ 101 ಹೊಸ ಕೋವಿಡ್-19 ಪ್ರಕರಣಗಳು ದೃಢಪಟ್ಟಿವೆ ಎಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಪ್ರಕಟನೆ ತಿಳಿಸಿದೆ. 

ಮಂಗಳವಾರ ಸಂಜೆ ಕೇವಲ ಒಂದು ಪ್ರಕರಣ ದೃಢಪಟ್ಟಿದ್ದು, ರಾಜ್ಯದಲ್ಲಿ ಒಟ್ಟಾರೆ ಸೋಂಕಿತರ ಸಂಖ್ಯೆ 2283 ಕ್ಕೆ ಏರಿಕೆಯಾಗಿದ್ದು, ಅದರಲ್ಲಿ 748 ಜನರು ಗುಣಮುಖರಾಗಿ ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದಾರೆ. ಉಳಿದ 1489 ಮಂದಿಯನ್ನು ಆಯಾ ಜಿಲ್ಲಾ ನಿಗದಿತ ಆಸ್ಪತ್ರೆಗಳಲ್ಲಿ ಪ್ರತ್ಯೇಕವಾಗಿರಿಸಿ ಚಿಕಿತ್ಸೆ ನೀಡಲಾಗುತ್ತಿದೆ. ಕೋವಿಡ್-19 ಸೋಂಕಿನಿಂದ ಮೃತಪಟ್ಟವರ ಒಟ್ಟು ಸಂಖ್ಯೆ 44ಕ್ಕೆ ಏರಿದೆ.

ರಾಜ್ಯಾದ್ಯಂತ ಇದುವರೆಗೂ 25,852 ವ್ಯಕ್ತಿಗಳನ್ನು ನಿಗಾವಣೆಯಲ್ಲಿಡಲಾಗಿದ್ದು, 12,569 ಜನರು ಪ್ರಥಮ ಸಂಪರ್ಕಿತರಾಗಿದ್ದರೆ, 13,283 ದ್ವಿತೀಯ ಸಂಪರ್ಕಿತರಾಗಿದ್ದಾರೆ. ಇಂದು 9,020 ವ್ಯಕ್ತಿಗಳ ಮಾದರಿ ಪರೀಕ್ಷಿಸಲಾಗಿದ್ದು, 8,169 ವ್ಯಕ್ತಿಗಳ ಮಾದರಿಗಳು ನೆಗೆಟಿವ್ ಬಂದಿದೆ. ಒಟ್ಟಾರೆ 2,28,914 ಮಾದರಿಗಳಲ್ಲಿ 2,23,477 ಮಾದರಿಗಳ ವರದಿಯು ನೆಗೆಟಿವ್ ಬಂದಿದೆ.

ಬೆಂಗಳೂರು ನಗರ 2, ಬೆಳಗಾವಿ 13, ಯಾದಗಿರಿ 14, ದಾವಣಗೆರೆ 11, ಚಿಕ್ಕಬಳ್ಳಾಪುರ 1, ಹಾಸನ 13, ಉಡುಪಿ 3, ಬೀದರ್ 10, ವಿಜಯಪುರ 6, ಚಿತ್ರದುರ್ಗ 20, ಬಳ್ಳಾರಿ 1, ಕೋಲಾರ 2, ಕೊಪ್ಪಳ 1, ಇತರೆ 4 ಪ್ರಕರಣಗಳು ವರದಿಯಾಗಿವೆ.

ಬಿಬಿಎಂಪಿ ವ್ಯಾಪ್ತಿಯಲ್ಲಿರುವ 31 ಜ್ವರ ಚಿಕಿತ್ಸಾಲಯದಲ್ಲಿ ಒಟ್ಟು 174 ಇಂದು ಹಾಗೂ ಒಟ್ಟಾರೆ 10,409 ವ್ಯಕ್ತಿಗಳಿಗೆ ತಪಾಸಣೆ ನಡೆಸಲಾಗಿದೆ. ರಾಜ್ಯದ 532 ಜ್ವರ ಚಿಕಿತ್ಸಾಲಯದಲ್ಲಿ 10,635 ವ್ಯಕ್ತಿಗಳನ್ನು ಮಂಗಳವಾರ ಹಾಗೂ ಇದುವರೆಗೂ 5,49,980 ವ್ಯಕ್ತಿಗಳನ್ನು ತಪಾಸಣೆ ಮಾಡಲಾಗಿದೆ. ಅಲ್ಲದೆ, 104 ಖಾಸಗಿ ವೈದ್ಯಕೀಯ ಆಸ್ಪತ್ರೆ ಹಾಗೂ ಕಾಲೇಜುಗಳಲ್ಲಿ ಇಂದು 2,098 ವ್ಯಕ್ತಿಗಳನ್ನು ಮತ್ತು ಒಟ್ಟಾರೆ 54,113 ವ್ಯಕ್ತಿಗಳನ್ನು ತಪಾಸಣೆ ಮಾಡಲಾಗಿದೆ. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News