ಸಿಎಂ ಯಡಿಯೂರಪ್ಪನವರಿಂದ ರಾಜ್ಯದ ಜನರಿಗೆ ದ್ರೋಹ: ಸಿದ್ದರಾಮಯ್ಯ

Update: 2020-05-27 16:53 GMT

ಬೆಂಗಳೂರು, ಮೇ 27: ಕೊರೋನ ಸೋಂಕು ತಡೆಗಟ್ಟಲು ಹೇರಿದ್ದ ಲಾಕ್‍ಡೌನ್‍ನಿಂದಾಗಿ ಸಂಕಷ್ಟಕ್ಕೆ ಸಿಲುಕಿರುವ ಜನರಿಗೆ ಪರಿಹಾರದ ಭರವಸೆ ನೀಡಿದ್ದ ಮುಖ್ಯಮಂತ್ರಿ ಯಡಿಯೂರಪ್ಪ ರಾಜ್ಯದ ಜನರಿಗೆ ದ್ರೋಹ ಮಾಡಿದ್ದಾರೆ' ಎಂದು ವಿಪಕ್ಷ ನಾಯಕ ಹಾಗೂ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಬುಧವಾರ ಸರಣಿ ಟ್ವೀಟ್ ಮಾಡಿರುವ ಅವರು, ಮುಖ್ಯಮಂತ್ರಿ ಯಡಿಯೂರಪ್ಪ 1,610 ಕೋಟಿ ರೂ.ವಿಶೇಷ ಪ್ಯಾಕೇಜ್ ಭರವಸೆ ನೀಡಿದ್ದರು. ಇದೀಗ ಅದನ್ನು ಈಡೇರಿಸಿಲ್ಲ. ಮುಖ್ಯಮಂತ್ರಿ ಯಡಿಯೂರಪ್ಪ ಅವರು ಪ್ರಧಾನಿ ನರೇಂದ್ರ ಮೋದಿಯವರನ್ನು ಅನುಸರಿಸುತ್ತಿದ್ದಾರೆ ಎಂದು ಇದೇ ಸಂದರ್ಭದಲ್ಲಿ ಲೇವಡಿ ಮಾಡಿದ್ದಾರೆ.

ಮುಖ್ಯಮಂತ್ರಿ ಯಡಿಯೂರಪ್ಪನವರು ಕೊರೋನ ಸೋಂಕಿನ ಬಿಕ್ಕಟ್ಟನ್ನು ತಮ್ಮ ರಾಜಕೀಯ ಲಾಭಕ್ಕಾಗಿ ದುರ್ಬಳಕೆ ಮಾಡಿಕೊಳ್ಳುವುದು ಸರಿಯಲ್ಲ ಎಂದು ಆಕ್ಷೇಪಿಸಿರುವ ಸಿದ್ದರಾಮಯ್ಯ, ಬಟ್ಟೆ ತೊಳೆಯುವ ಮಡಿವಾಳರು ಸೇರಿದಂತೆ ಇನ್ನಿತರ ವೃತ್ತಿ ಆಧಾರಿತ ಅಸಂಘಟಿತ ಸಮುದಾಯಗಳವರು ಪರವಾನಗಿ ಪಡೆದಿರಲು ಸಾಧ್ಯವೇ? ರಾಜ್ಯ ಸರಕಾರ ಪರಿಹಾರ ನೀಡಲು ಪರವಾನಗಿ ಕೇಳುತ್ತಿದೆ ಎಂಬ ವರದಿಗಳಿವೆ. ಈ ಬಗ್ಗೆ ವಾಸ್ತವತೆ ಅರಿತು ಸಂಕಷ್ಟದಲ್ಲಿರುವವರಿಗೆ ಪರಿಹಾರ ನೀಡಬೇಕು ಎಂದು ಆಗ್ರಹಿಸಿದ್ದಾರೆ.

ಆರ್ಥಿಕ ಅಭಿವೃದ್ಧಿ ಮತ್ತು ಸಾಮಾಜಿಕ ಬದಲಾವಣೆಗಳೆಂಬ ಎರಡು ಹಳಿಗಳ ಮೇಲೆ ಆಧುನಿಕ ಭಾರತದ ಅಭಿವೃದ್ಧಿಯ ಬಂಡಿಗೆ ಚಾಲನೆ ನೀಡಿ ಗುರಿಯಡೆಗೆ ಮುನ್ನಡೆಸಿದ ದೃಷ್ಟಾರ ದೇಶದ ಮೊದಲ ಪ್ರಧಾನಿ ಪಂಡಿತ ಜವಾಹರಲಾಲ್ ನೆಹರೂ. ಆ ಹಿರಿಯ ಚೇತನಕ್ಕೆ ಗೌರವಪೂರ್ವ ನಮನ ಸಲ್ಲಿಸುವ ಮೂಲಕ ಪುಣ್ಯಸ್ಮರಣೆ ಮಾಡೋಣ'

-ಸಿದ್ದರಾಮಯ್ಯ ವಿಪಕ್ಷ ನಾಯಕ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News