ಮಡಿಕೇರಿ: ಬಾವಿಗೆ ಬಿದ್ದು ಒಂದು ವರ್ಷದ ಮಗು ಸಾವು

Update: 2020-05-27 18:20 GMT

ಮಡಿಕೇರಿ, ಮೇ.27: ಒಂದು ವರ್ಷದ ಗಂಡು ಮಗುವೊಂದು ಬಾವಿಗೆ ಬಿದ್ದು ಮೃತಪಟ್ಟಿರುವ ಘಟನೆ ವಿರಾಜಪೇಟೆಯ ಆರ್ಜಿ ಗ್ರಾಮದ ತೋಟದ ಲೈನ್‍ಮನೆಯೊಂದರ ಸಮೀಪ ನಡೆದಿದೆ. 

ಮನು ಎಂಬುವವರ ಪುತ್ರ ನೆಲ ಬಾವಿಗೆ ಬಿದ್ದು ಸಾವನ್ನಪ್ಪಿದ್ದಾನೆ.

ಮನೆ ಮುಂದೆ ಆಟವಾಡುತ್ತಿದ್ದ ಸಂದರ್ಭ ಆಕಸ್ಮಿಕವಾಗಿ ನೆಲ ಬಾವಿಗೆ ಬಿದ್ದ ಮಗುವನ್ನು ಆಸ್ಪತ್ರೆಗೆ ಕರೆದೊಯ್ಯಲಾಯಿತ್ತಾದರೂ ಅದಾಗಲೇ ಮಗು ಸಾವನ್ನಪ್ಪಿತ್ತು. ವಿರಾಜಪೇಟೆ ಠಾಣೆಯಲ್ಲಿ ಮೊಕದ್ದಮೆ ದಾಖಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News