ಮೇ 28: ಕಾರ್ಮಿಕರ ದುಡಿಮೆ ಅವಧಿ ಇಳಿಕೆಗೆ ಆಗ್ರಹಿಸಿ ಆನ್‍ಲೈನ್ ಅಭಿಯಾನ

Update: 2020-05-27 18:34 GMT

ಬೆಂಗಳೂರು, ಮೇ 27: ವಲಸೆ ಕಾರ್ಮಿಕರು, ಮಹಿಳೆಯರು ಮತ್ತು ಅವರ ಮಕ್ಕಳಿಗೆ ಸುರಕ್ಷಿತ ಪ್ರಯಾಣದ ಖಾತ್ರಿಪಡಿಸಿ, ಸೂಕ್ತ ಆಹಾರ ನೀಡಬೇಕು. ಕಾರ್ಮಿಕರ ದುಡಿಮೆ ಅವಧಿ 8ರಿಂದ 10ಗಂಟೆ ಹೆಚ್ಚಳ ಆದೇಶವನ್ನು ಕೂಡಲೇ ಹಿಂಪಡೆಯುವುದು ಸೇರಿದಂತೆ ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಎಐಎಂಎಸ್‍ಎಸ್ ನಾಳೆ(ಮೇ 28) ಆನ್‍ಲೈನ್ ಅಭಿಯಾನ ಹಮ್ಮಿಕೊಂಡಿದೆ.

ಕೊರೋನ ಸೋಂಕು ತಡೆಗಟ್ಟಲು ಹೇರಿರುವ ಲಾಕ್‍ಡೌನ್‍ನಿಂದ ವಲಸೆ ಕಾರ್ಮಿಕರು, ದಿನಗೂಲಿ ಕಾರ್ಮಿಕರ ಸಂಕಷ್ಟಕ್ಕೆ ಸಿಲುಕಿದ್ದು, ಅವರಿಗೆ ಸೂಕ್ತ ಪರಿಹಾರ ವಿತರಣೆ ಮಾಡಬೇಕು. ಕೌಟುಂಬಿಕ ದೌರ್ಜನ್ಯಗಳನ್ನು ತಡೆಗಟ್ಟಲು ಸೂಕ್ತ ಕ್ರಮ ಕೈಗೊಳ್ಳಬೇಕು. ಮದ್ಯ ಮಾರಾಟವನ್ನು ಸಂಪೂರ್ಣ ನಿಲ್ಲಿಸಬೇಕು ಎಂದು ಆಗ್ರಹಿಸಿ ಅಭಿಯಾನ ಹಮ್ಮಿಕೊಳ್ಳಲಾಗಿದೆ ಎಂದು ಕಾರ್ಯದರ್ಶಿ ಎ.ಶಾಂತಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News