ಚಿಕ್ಕಮಗಳೂರಿನಲ್ಲಿ ಮತ್ತೆ ಮೂರು ಕೊರೋನ ಪಾಸಿಟಿವ್

Update: 2020-05-28 08:07 GMT

ಚಿಕ್ಕಮಗಳೂರು : ಜಿಲ್ಲೆಯಲ್ಲಿ ಮತ್ತೆ ಮೂರು ಮಂದಿಯಲ್ಲಿ ಕೊರೋನ ಪಾಸಿಟಿವ್ ದೃಢವಾಗಿದೆ ಎಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಪ್ರಕಟನೆಯಲ್ಲಿ ತಿಳಿಸಿದೆ.

ಗ್ರೀನ್ ಝೋನ್ ತಾಲೂಕು ಶೃಂಗೇರಿಯಲ್ಲೂ ಕೊರೋನ ಪಾಸಿಟಿವ್ ಆದ ಬಗ್ಗೆ ವರದಿಯಾಗಿದೆ. ಶೃಂಗೇರಿ ಮೂಲದ ಇಬ್ಬರಿಗೆ ಕೊರೋನ ಪಾಸಿಟಿವ್, ಮೂಡಿಗೆರೆಯ ಒರ್ವ ವ್ಯಕ್ತಿಗೆ ಪಾಸಿಟಿವ್ ಆಗಿರುವ ಬಗ್ಗೆ ವರದಿಯಾಗಿದೆ.

ಮುಂಬೈನಿಂದ ಬಂದ ಇಬ್ಬರು, ದೆಹಲಿಯಿಂದ ಬಂದ ಓರ್ವರಲ್ಲಿ ಸೋಂಕು ಪತ್ತೆಯಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News