ವೋಲ್ವೋ ಬಸ್ ಸಂಚಾರಕ್ಕೆ ರಾಜ್ಯ ಸರಕಾರ ಅನುಮತಿ

Update: 2020-05-29 16:37 GMT

ಬೆಂಗಳೂರು, ಮೇ 29: ಹವಾನಿಯಂತ್ರಿತ ವೋಲ್ವೋ ಬಸ್ ಗಳ ಸಂಚಾರಕ್ಕೆ ರಾಜ್ಯ ಸರಕಾರ ಅನುಮತಿ ನೀಡಿದೆ.

ಕೊರೋನ ಲಾಕ್​ಡೌನ್ ಹಿನ್ನೆಲೆ ಬಸ್ ಸಂಚಾರಕ್ಕೆ ತಡೆ ನೀಡಲಾಗಿತ್ತು. ಲಾಕ್​ಡೌನ್ ಸಡಿಲಿಕೆ ಬಳಿಕ ಸಾಮಾನ್ಯ ಬಸ್ ಗಳ ಸಂಚಾರಕ್ಕೆ ಮಾತ್ರ ಅನುಮತಿ ನೀಡಲಾಗಿತ್ತು. ಇದೀಗ ವೋಲ್ವೋ ಬಸ್ ಗಳನ್ನು ಕೂಡ ರಸ್ತೆಗಿಳಿಸಲು ಸರಕಾರ ನಿರ್ಧಾರ ಮಾಡಿದೆ.

ಲಾಕ್​ಡೌನ್ ನಿಯಮಗಳನ್ನು ಹಂತಹಂತವಾಗಿ ಸಡಿಲಗೊಳಿಸಿ ಈಗಾಗಲೇ ದೇಶಿ ವಿಮಾನ ಹಾಗೂ ರಾಜ್ಯದೊಳಗಿನ ರೈಲ್ವೆ ಸೇವೆ ಆರಂಭಿಸಲಾಗಿದೆ. ಐಟಿಬಿಟಿ ಕಂಪನಿಗಳು ಸೇರಿದಂತೆ ಎಲ್ಲಾ ಇಲಾಖೆಗಳು ತೆರೆದಿವೆ. ಈ ಹಿನ್ನೆಲೆ ಹವಾನಿಯಂತ್ರಿತ ವಜ್ರ ಮತ್ತು ವಾಯುವಜ್ರ ಸಂಚಾರಕ್ಕೆ ಅನುಮತಿ ನೀಡಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News