ಯಡಿಯೂರಪ್ಪ ರಾಜಾಹುಲಿ, ಆ ಹುಲಿಗೆ ನಿವೃತ್ತಿಯ ಪ್ರಶ್ನೆಯೇ ಇಲ್ಲ: ಸಚಿವ ಆರ್.ಅಶೋಕ್

Update: 2020-05-30 13:45 GMT

ಬೆಂಗಳೂರು, ಮೇ 30: ಯಡಿಯೂರಪ್ಪ ಸ್ಟ್ರಾಂಗ್ ಅನ್ನೋದಕ್ಕಿಂತ ಯಡಿಯೂರಪ್ಪ ರಾಜಾಹುಲಿ. ಆ ಹುಲಿಗೆ ನಿವೃತ್ತಿ ಅನ್ನೋ ಪ್ರಶ್ನೆಯೇ ಇಲ್ಲ ಎಂದು ಕಂದಾಯ ಸಚಿವ ಆರ್.ಅಶೋಕ್ ಭಿನ್ನಮತೀಯರಿಗೆ ತಿರುಗೇಟು ನೀಡಿದ್ದಾರೆ.

ಶನಿವಾರ ಸಿಎಂ ಗೃಹ ಕಚೇರಿ ಕೃಷ್ಣಾದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ನಾಲ್ಕೈದು ಜನರು ಒಟ್ಟಿಗೆ ಸೇರಿ ಊಟ ಮಾಡಿದರೆ ಅದು ಭಿನ್ನಮತೀಯರ ಸಭೆಯಲ್ಲ. ಮಂತ್ರಿಗಳ ಮನೆಗೆ ದಿನನಿತ್ಯ ನಾಲ್ಕೈದು ಜನರು ಬರುತ್ತಾರೆ. ಯಡಿಯೂರಪ್ಪನವರು ಈ ವಯಸ್ಸಿನಲ್ಲಿಯೂ ಉತ್ತಮ ಕೆಲಸ ಮಾಡುತ್ತಿದ್ದಾರೆ ಎಂದರು.

ಮೂರು ವರ್ಷಕ್ಕೆ ಒಂದು ದಿನವೂ ಕಡಿಮೆಯಿಲ್ಲದಂತೆ ಯಡಿಯೂರಪ್ಪ ಮುಖ್ಯಮಂತ್ರಿಯಾಗಿರುತ್ತಾರೆ. ಒಂದು ದಿನವೂ ಕಡಿಮೆಯಾಗಲ್ಲ. ನನಗೆ ಆ ಭರವಸೆಯಿದೆ. ರಾಜ್ಯದ ಜನರಿಗೂ ಇದೆ. ನಮ್ಮ ಶಾಸಕರಿಗೂ ಇದೆ. ಯಡಿಯೂರಪ್ಪರಿಗೆ ಏನೂ ಆಗೋದಿಲ್ಲ ಎಂದು ನುಡಿದರು.

ಶಾಪಿಂಗ್ ಮಾಡಲು ರವಿವಾರ ಒಂದೇ ದಿನ ಅವಕಾಶ ಇರುವುದು. ಹೀಗಾಗಿ ಖರೀದಿಗೆ ಹಾಗೂ ಸ್ನೇಹಿತರನ್ನ ಭೇಟಿಯಾಗಲು ಅವಕಾಶ ಬೇಕಿತ್ತು. ಅದಕ್ಕೆ ರವಿವಾರ ಕರ್ಫ್ಯೂ ತೆಗೆಯಲಾಗಿದೆ ಎಂದು ಲಾಕ್‍ಡೌನ್ ತೆರವು ವಿಚಾರಕ್ಕೆ ಕುರಿತಂತೆ ಸಚಿವ ಪ್ರತಿಕ್ರಿಯಿಸಿದ್ದಾರೆ.

ಸಿಎಂ ನಿರ್ಧಾರ ಸ್ವಾಗತಾರ್ಹ. ದುಡಿಯುವ ವರ್ಗಕ್ಕೆ ರಿಲ್ಯಾಕ್ಸ್ ಮಾಡಿಕೊಡಲು ಅನುಕೂಲವಾಗಿದೆ. ವಾರವೆಲ್ಲ ನೌಕರರು, ಉದ್ದಿಮೆದಾರರು ಕೆಲಸ ಮಾಡಿರುತ್ತಾರೆ. ಅವರಿಗೆ ಶಾಪಿಂಗ್ ಮಾಡಲು ಅವಕಾಶ ಇರೋದು ರವಿವಾರ ಒಂದೇ ದಿನ. ಹೀಗಾಗಿ ಖರೀದಿ ಹಾಗೂ ಸ್ನೇಹಿತರನ್ನ ಭೇಟಿಯಾಗಲು ಅವಕಾಶ ಬೇಕಿತ್ತು. ಈ ಹಿನ್ನೆಲೆಯಲ್ಲಿ ಕರ್ಫ್ಯೂ ತೆಗೆಯಲಾಗಿದೆ ಎಂದರು.

ಲಾಕ್‍ಡೌನ್ ಮುಕ್ತ ಮಾಡಲು ರಾಜ್ಯ ಸರಕಾರ ಮುಕ್ತವಾಗಿದ್ದು, ಸೋಮವಾರದಿಂದ ಬಹುತೇಕ ಫ್ರೀಯಾಗಿರುತ್ತದೆ. ಮಾಲ್, ಸಿನಿಮಾ ಥಿಯೇಟರ್ ಸದ್ಯಕ್ಕೆ ಓಪನ್ ಇರಲ್ಲ. ಹೊಟೇಲ್ ಸೇರಿದಂತೆ ಹಲವು ವಲಯಗಳಿಗೆ ವಿನಾಯಿತಿ ಸಿಗಲಿದೆ. ರಾಜ್ಯ ಸರಕಾರಕ್ಕೆ ಕೇಂದ್ರ ಅಧಿಕಾರ ಕೊಟ್ಟರೆ ನಾವೇ ನಿರ್ಧಾರ ತೆಗೆದುಕೊಳ್ಳುತ್ತೇವೆ. ಕೇಂದ್ರ ಸರಕಾರದ ಸೂಚನೆಗೆ ಕಾಯುತ್ತಿದ್ದೇವೆ ಎಂದು ತಿಳಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News