ದಾವಣಗೆರೆ: ಕೊರೋನ ಸೋಂಕಿತರ ಸಂಖ್ಯೆ 156ಕ್ಕೇರಿಕೆ

Update: 2020-05-31 17:22 GMT

ದಾವಣಗೆರೆ, ಮೇ.31: ಜಿಲ್ಲೆಯಲ್ಲಿ ಮೂವರು ವೈದ್ಯಕೀಯ ವಿದ್ಯಾರ್ಥಿಗಳು (ಪಿಜಿ) ಸೇರಿದಂತೆ ಆರು ಜನರಿಗೆ ಕೊರೋನ ಸೋಂಕು ದೃಢಪಟ್ಟಿದೆ. 

ಇವರು ಇಲ್ಲಿನ ಜಿಲ್ಲಾಸ್ಪತ್ರೆಯಲ್ಲಿ ಕಾರ್ಯನಿರ್ವಹಿಸುತ್ತಿದ್ದರು ಎಂದು ತಿಳಿದು ಬಂದಿದೆ. ಈ ಮೂಲಕ ದಾವಣಗೆರೆಯಲ್ಲಿ ಕೊರೋನ ಸೋಂಕಿತರ ಸಂಖ್ಯೆ 156ಕ್ಕೇರಿದೆ. ಇದರಲ್ಲಿ ಒಟ್ಟು 121 ಸೋಂಕಿತರು ಬಿಡುಗಡೆ ಹೊಂದಿದ್ದು, 31 ಸಕ್ರಿಯ ಪ್ರಕರಣಗಳಿವೆ. ಇಂದು 17 ಸೋಂಕಿತರು ಕೋವಿಡ್ ಆಸ್ಪತ್ರೆಯಿಂದ ಬಿಡುಗಡೆ ಹೊಂದಿದ್ದಾರೆ.

ರೋಗಿ 3,216(12) ಗಂಡು, ರೋಗಿ 3,217(31)ಹೆಣ್ಣು, ರೋಗಿ 3,070(27)ಹೆಣ್ಣು, ರೋಗಿ -3,071(32)ಗಂಡು, ರೋಗಿ-3072(22)ಗಂಡು, ರೋಗಿ 3073(14)ಹೆಣ್ಣು ಕೊರೋನ ಧೃಢಪಟ್ಟ ಪ್ರಕರಣಗಳಾಗಿವೆ.

ಕಂಟೈನೆಂಟ್ ಝೋನ್‍ಗಳಾದ ಅನೆಕೊಂಡ, ಶಿವಕುಮಾರ ಸ್ವಾಮಿ ಬಡಾವಣೆ, ವಿನಾಯಕ ನಗರದಲ್ಲಿ ತಲಾ ಒಂದು ಪ್ರಕರಣ ಕಂಡು ಬಂದಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News