ಆನ್‌ಲೈನ್ ತರಗತಿ ಪ್ರಸ್ತಾವ: ಸಮಾಜದ ದೊಡವರ್ಗ ಶಿಕ್ಷಣದಿಂದ ವಂಚಿತವಾಗಲಿದೆ; ಸಿದ್ದರಾಮಯ್ಯ

Update: 2020-05-31 18:28 GMT

ಬೆಂಗಳೂರು, ಮೇ 31: ‘ಪದವಿ ಮತ್ತು ವೃತ್ತಿಪರ ಶಿಕ್ಷಣವನ್ನು ಆನ್‌ಲೈನ್ ತರಗತಿಗಳ ಮೂಲಕ ನೀಡುವ ಪ್ರಧಾನಿ ಮೋದಿಯವರ ಪ್ರಸ್ತಾವ, ದೇಶದ ಸಾಮಾಜಿಕ ವಾಸ್ತವದ ಅರಿವಿಲ್ಲದವರ ಕುರುಡುತನದ ಆಲೋಚನೆ. ಇದರಿಂದ ಸಮಾಜದ ದೊಡ್ಡವರ್ಗ ಶಿಕ್ಷಣದಿಂದ ವಂಚಿತವಾಗಲಿದೆ’ ಎಂದು ವಿಪಕ್ಷ ನಾಯಕ ಸಿದ್ದರಾಮಯ್ಯ ಎಚ್ಚರಿಸಿದ್ದಾರೆ. 

ರವಿವಾರ ಸರಣಿ ಟ್ವೀಟ್ ಮಾಡಿರುವ ಅವರು, ‘ಭಾರತದ ಅಸ್ತಿತ್ವ ಇರುವುದು ಹಳ್ಳಿಗಳಲ್ಲಿ. ಅಲ್ಲೆಲ್ಲ ಕಂಪ್ಯೂಟರ್, ಲ್ಯಾಪ್‌ಟಾಪ್, ಸ್ಮಾರ್ಟ್‌ಪೋನ್ ಗಳೆಲ್ಲಿಂದ ಬರಬೇಕು. ಫೋನ್ ಇದ್ದರೂ ನೆಟ್‌ವರ್ಕ್ ಎಲ್ಲಿದೆ. ಆನ್‌ಲೈನ್ ಶಿಕ್ಷಣದಲ್ಲಿ ಹಳ್ಳಿ ವಿದ್ಯಾರ್ಥಿಗಳು ಪಾಲ್ಗೊಳ್ಳುವುದು ಹೇಗೆ. ದೇಶ ಆಳುವ ನಾಯಕರಿಗೆ ಈ ಪ್ರಾಥಮಿಕ ಜ್ಞಾನ ಬೇಡವೇ?’ಎಂದು ಟೀಕಿಸಿದ್ದಾರೆ.

ಪರಿವಾರ, ತಳವಾರ, ಸಿದ್ದ ಸಮುದಾಯಗಳನ್ನು ವಿಳಂಬವಾಗಿ ಯಾದರೂ ಪರಿಶಿಷ್ಟ ಪಂಗಡಕ್ಕೆ ಸೇರಿಸಿ ಗೆಜೆಟ್ ಆದೇಶ ಹೊರಡಿಸಿರುವ ಮುಖ್ಯಮಂತ್ರಿ ಯಡಿಯೂರಪ್ಪನವರಿಗೆ ಧನ್ಯವಾದಗಳು. ಹಿಂದೆ ನಮ್ಮ ಸರಕಾರ ಈ ಬಗ್ಗೆ ಸಂಪುಟದಲ್ಲಿ ತೀರ್ಮಾನಿಸಿ ಬೇಡಿಕೆಯನ್ನು ಕೇಂದ್ರ ಸರಕಾರಕ್ಕೆ ಕಳುಹಿಸಿ ಕೊಟ್ಟಿತ್ತು. ಸಹಕರಿಸಿದ ಎಲ್ಲರಿಗೂ ವಂದನೆಗಳು.

-ಸಿದ್ದರಾಮಯ್ಯ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News