ರಾಜ್ಯದಲ್ಲಿ ಇಂದು 187 ಮಂದಿಗೆ ಕೊರೋನ ಪಾಸಿಟಿವ್; ಸೋಂಕಿತರ ಸಂಖ್ಯೆ 3,408ಕ್ಕೆ ಏರಿಕೆ

Update: 2020-06-01 12:43 GMT

ಬೆಂಗಳೂರು : ರಾಜ್ಯದಲ್ಲಿ ರವಿವಾರ ಸಂಜೆ 5 ಗಂಟೆಯಿಂದ ಸೋಮವಾರ ಸಂಜೆ ಅವಧಿಯಲ್ಲಿ 187 ಹೊಸ ಕೋವಿಡ್-19 ಪ್ರಕರಣಗಳು ದೃಢಪಟ್ಟಿವೆ ಎಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಪ್ರಕಟನೆ ತಿಳಿಸಿದೆ.

ರಾಜ್ಯದಲ್ಲಿ ಒಟ್ಟಾರೆ ಸೋಂಕಿತರ ಸಂಖ್ಯೆ 3,408 ಕ್ಕೆ ಏರಿಕೆಯಾಗಿದ್ದು, ಅದರಲ್ಲಿ 1328 ಜನರು ಗುಣಮುಖರಾಗಿ ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದಾರೆ. ಉಳಿದ 2,026 ಮಂದಿಯನ್ನು ಆಯಾ ಜಿಲ್ಲಾ ನಿಗದಿತ ಆಸ್ಪತ್ರೆಗಳಲ್ಲಿ ಪ್ರತ್ಯೇಕವಾಗಿರಿಸಿ ಚಿಕಿತ್ಸೆ ನೀಡಲಾಗುತ್ತಿದೆ. ಕೋವಿಡ್-19 ಸೋಂಕಿನಿಂದ ಮೃತ ಪಟ್ಟವರ ಒಟ್ಟು ಸಂಖ್ಯೆ 52ಕ್ಕೆ ಏರಿದೆ.

ಇಂದು ಉಡುಪಿ 73, ಬೆಂಗಳೂರು ನಗರ 28,  ಕಲಬುರಗಿ 24, ಮಂಡ್ಯ 15, ದಕ್ಷಿಣ ಕನ್ನಡ 4,  ಹಾಸನ 16 ಮಂದಿ ಸೇರಿದಂತೆ ಒಟ್ಟು 187 ಮಂದಿಯಲ್ಲಿ ಸೋಂಕು ಪತ್ತೆಯಾಗಿರುವುದಾಗಿ ಆರೋಗ್ಯ ಇಲಾಖೆ ತಿಳಿಸಿದೆ.

90 ವರ್ಷದ ಪುರುಷ ಬೆಂಗಳೂರು ನಗರ ನಿವಾಸಿಂ ಇವರು ನಿಗದಿತ ಆಸ್ಪತ್ರೆಗೆ ಎ. 24ರಂದು ದಾಖಲಾಗಿದ್ದರು. ಇವರು ರವಿವಾರ ಬಹು ಅಂಗಾಂಗ ವೈಫ್ಯಲ್ಯದಿಂದ ಮೃತಪಟ್ಟಿದ್ದಾರೆ ಎಂದು ಪ್ರಕಟನೆ ತಿಳಿಸಿದೆ. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News