ಜೂ.4ಕ್ಕೆ ಸರಕಾರಿ ನೌಕರರಿಂದ 'ಅಖಿಲ ಭಾರತ ಪ್ರತಿಭಟನಾ ದಿನ'

Update: 2020-06-01 17:20 GMT

ಬೆಂಗಳೂರು, ಜೂ.1: ರಾಜ್ಯ ಸರಕಾರದ ನೌಕರ ವಿರೋಧಿ ನೀತಿಯನ್ನು ಖಂಡಿಸಿ ಜೂ.4 ರಂದು ರಾಜ್ಯ ವ್ಯಾಪಿ ಸರಕಾರಿ ನೌಕರರು ಕಪ್ಪು ಪಟ್ಟಿ ಧರಿಸಿ ಕರ್ತವ್ಯ ನಿರ್ವಹಿಸುವ ಮೂಲಕ ಅಖಿಲ ಭಾರತ ಪ್ರತಿಭಟನಾ ದಿನ ಆಚರಿಸುವುದಾಗಿ ಅಖಿಲ ಕರ್ನಾಟಕ ರಾಜ್ಯ ಸರಕಾರಿ ನೌಕರರ ಒಕ್ಕೂಟದ ಅಧ್ಯಕ್ಷ ಮಹದೇವಯ್ಯ ಮಠಪತಿ ತಿಳಿಸಿದ್ದಾರೆ.

ಕೋವಿಡ್ ವೈರಾಣು ತಡೆಗಟ್ಟುವ ನಿಟ್ಟಿನಲ್ಲಿ ಸರಕಾರಿ ನೌಕರರು ಹಗಲಿರುಳು ಕೆಲಸ ಮಾಡಿದ್ದಾರೆ. ಇಂತಹ ಸಂದರ್ಭದಲ್ಲಿ 18 ತಿಂಗಳ (2020ರ ಜನವರಿಯಿಂದ 2021ರ ಜೂನ್ ವರೆಗೆ) ತುಟ್ಟಿಭತ್ತೆಯನ್ನು ಸ್ಥಗಿತಗೊಳಿಸುವುದಾಗಿ ಸರಕಾರ ಹೇಳಿದೆ. ಜತೆಗೆ ನಾನಾ ಇಲಾಖೆಗಳ ವಿಲೀನದ ನೆಪದಲ್ಲಿ ಸಹಸ್ರಾರು ಹುದ್ದೆಗಳನ್ನು ಕಡಿತಗೊಳಿಸಲು ಸರಕಾರ ಪ್ರಕ್ರಿಯೆ ಆರಂಭಿಸಿದೆ. ಇಂತಹ ನಾನಾ ನೌಕರ ವಿರೋಧಿ, ಕಾರ್ಮಿಕ ವಿರೋಧಿ ಧೋರಣೆಯನ್ನು ಖಂಡಿಸಿ, ಸರಕಾರ ನೌಕರರ ಹಿತ ಕಾಪಾಡಬೇಕೆಂದು ಒತ್ತಾಯಿಸಿ ಪ್ರತಿಭಟನೆ ನಡೆಸಲಾಗುತ್ತಿದೆ ಎಂದು ಅವರು ಪ್ರಕಟನೆಯಲ್ಲಿ ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News