ಕೊರೋನ ವೈರಸ್ ಆತಂಕದ ನಡುವೆ ಎಬೋಲಾ ವೈರಸ್ ಪ್ರಕರಣಗಳು ಪತ್ತೆ

Update: 2020-06-02 12:19 GMT

ಜಿನೀವಾ: ಡೆಮಾಕ್ರಟಿಕ್ ರಿಪಬ್ಲಿಕ್ ಆಫ್ ಕಾಂಗೋದಲ್ಲಿ ಹೊಸ ಎಬೋಲಾ ವೈರಸ್ ಸಾಂಕ್ರಾಮಿಕ ಪತ್ತೆಯಾಗಿದೆ ಎಂದು ಅಲ್ಲಿನ ಸರ್ಕಾರ ಪ್ರಕಟಿಸಿದೆ. ಬಂಡಕಾ ಎಂಬಲ್ಲಿನ ವಂಗಟಾ ಆರೋಗ್ಯ ವಲಯದಲ್ಲಿ ಸೋಂಕು ಕಾಣಿಸಿಕೊಂಡಿದೆ.

ಪೂರ್ವ ಡೆಮಾಕ್ರೆಟಿಕ್ ರಿಪಬ್ಲಿಕ್ ಆಫ್ ಕಾಂಗೋದಲ್ಲಿ ಎಬೋಲಾ ಮತ್ತೆ ತಲೆ ಎತ್ತಿದೆ. ಕೋವಿಡ್-19 ಮತ್ತು ವಿಶ್ವದ ಅತಿದೊಡ್ಡ ಸಿಡುಬು ಸಾಂಕ್ರಾಮಿಕದ ವಿರುದ್ಧ ದೇಶ ಹೋರಾಡುತ್ತಿರುವ ಮಧ್ಯೆಯೇ ಮತ್ತೊಂದು ಸವಾಲು ಎದುರಾಗಿದೆ.

ವಂಗಟಾದಲ್ಲಿ ಆರು ಎಬೋಲಾ ಪ್ರಕರಣಗಳು ಪತ್ತೆಯಾಗಿವೆ ಎಂದು ಆರೋಗ್ಯ ಇಲಾಖೆ ಪ್ರಕಟಿಸಿದೆ. ಈ ಪೈಕಿ ನಾಲ್ವರು ಮೃತಪಟ್ಟಿದ್ದು, ಇಬ್ಬರಿಗೆ ಚಿಕಿತ್ಸೆ ನೀಡಲಾಗುತ್ತಿದೆ. ಆರರ ಪೈಕಿ ಮೂರು ಪ್ರಕರಣಗಳು ಪ್ರಯೋಗಾಲಯ ಪರೀಕ್ಷೆಯಲ್ಲಿ ದೃಢಪಟ್ಟಿವೆ. ಆರೋಗ್ಯ ಸರ್ವೇಕ್ಷಣೆ ಹೆಚ್ಚಿದಾಗ ಮತ್ತಷ್ಟು ಪ್ರಕರಣಗಳು ಬೆಳಕಿಗೆ ಬರುವ ನಿರೀಕ್ಷೆ ಇದೆ.

“ಜನರು ಎದುರಿಸುತ್ತಿರುವ ಆರೋಗ್ಯ ಸಮಸ್ಯೆಗಳಲ್ಲಿ ಕೋವಿಡ್-19 ಮಾತ್ರ ಇರುವುದಲ್ಲ ಎನ್ನುವುದರ ಎಚ್ಚರಿಕೆ ಸಂಕೇತ ಇದಾಗಿದೆ”ಎಂದು ವಿಶ್ವ ಆರೋಗ್ಯ ಸಂಸ್ಥೆ ಮಹಾ ಕಾರ್ಯದರ್ಶಿ ಡಾ.ಟೆಡ್ರೋಸ್ ಅಧನೋಮ್ ಘೆಬ್ರಿಯೆಸಿಸ್ ಹೇಳಿದ್ದಾರೆ.

ದೇಶದಲ್ಲಿ 1976ರಲ್ಲಿ ಮೊಟ್ಟಮೊದಲ ಬಾರಿಗೆ ಎಬೋಲಾ ಕಾಣಿಸಿಕೊಂಡ ಬಳಿಕ ಕಾಂಗೋದಲ್ಲಿ ಈ ಸೋಂಕು ಪತ್ತೆಯಾಗುತ್ತಿರುವುದು ಇದು ಹನ್ನೊಂದನೇ ಬಾರಿ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News