#ArrestHatemongerVindhya ಫಲಶ್ರುತಿ: ದ್ವೇಷ ಹರಡುತ್ತಿದ್ದ ಕೊಡಗಿನ ಯುವತಿ ವಿರುದ್ಧ ಪ್ರಕರಣ ದಾಖಲು

Update: 2020-06-02 17:59 GMT

ಕೊಡಗು: ಸಾಮಾಜಿಕ ಜಾಲತಾಣದಲ್ಲಿ ದ್ವೇಷದ ಪೋಸ್ಟ್ ಗಳನ್ನು ಹಾಕುತ್ತಿದ್ದ ಯುವತಿಯೊಬ್ಬಳ ಬಂಧನಕ್ಕಾಗಿ ಟ್ವಿಟರ್ ನಲ್ಲಿ ನಡೆದ #ArrestHatemongerVindhya ಅಭಿಯಾನ ಫಲ ನೀಡಿದ್ದು, ಆಕೆಯ ವಿರುದ್ಧ ಕೊಡಗು  ಪೊಲೀಸರು ಪ್ರಕರಣ ದಾಖಲಿಸಿದ್ದಾರೆ ಎಂದು ವರದಿಯಾಗಿದೆ.

ಮುಸ್ಲಿಮರು ಮತ್ತು ಇಸ್ಲಾಂ ಧರ್ಮದ ವಿರುದ್ಧ ಹಲವು ದ್ವೇಷದ ಪೋಸ್ಟ್ ಗಳನ್ನು ಮಾಡುತ್ತಾ ಕೋಮುದ್ವೇಷ ಸೃಷ್ಟಿಸುತ್ತಿದ್ದ ವಿಂಧ್ಯಾ ಪೂಣಚ್ಚ ಎಂಬಾಕೆಯನ್ನು ಬಂಧಿಸುವಂತೆ ಟ್ವಿಟರಿಗರು ಇಂದು #ArrestHatemongerVindhya ಅಭಿಯಾನ ನಡೆಸಿದ್ದರು. ಪ್ರತಿ ಟ್ವೀಟ್ ಗಳಿಗೂ ಕೊಡಗು ಜಿಲ್ಲಾಧಿಕಾರಿ ಮತ್ತು ಎಸ್ಪಿಯವರನ್ನು ಟ್ಯಾಗ್ ಮಾಡಿದ್ದರು.

ಮೊದಲು ಈ ಬಗ್ಗೆ ದೂರು ನೀಡಲು ತೆರಳಿದಾಗ ಕುಶಾಲನಗರ ಟೌನ್ ಪೊಲೀಸ್ ಠಾಣಾ ಇನ್ ಸ್ಪೆಕ್ಟರ್ ಎಫ್ ಐಆರ್ ದಾಖಲಿಸಲು ನಿರಾಕರಿಸಿದ್ದರು ಎನ್ನುವ ಆರೋಪ ಕೇಳಿಬಂದಿತ್ತು. ಈ ಬಗ್ಗೆ ಜಿಲ್ಲಾಧಿಕಾರಿ ಮತ್ತು ಎಸ್ಪಿಗೆ ಟ್ವಿಟರಿಗರು ದೂರು ನೀಡಿದ್ದರು.

ಇದೀಗ ದ್ವೇಷ ಹರಡಿದ ಯುವತಿಯ ವಿರುದ್ಧ ಸೆಕ್ಷನ್ 153 (ಎ), 105 ಅಡಿ ಪ್ರಕರಣ ದಾಖಲಿಸಿಕೊಳ್ಳಲಾಗಿದೆ ಎಂದು ದೂರುದಾರ ಅಝೀಝ್ ಮಾಹಿತಿ ನೀಡಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News