ಅಮೆರಿಕದಲ್ಲಿ ಕಪ್ಪು ವರ್ಣಿಯರ ಮೇಲೆ ದಾಳಿ ಖಂಡಿಸಿ ಸಿಂಧನೂರಿನಲ್ಲಿ ಪ್ರತಿಭಟನೆ

Update: 2020-06-03 10:34 GMT

ರಾಯಚೂರು, ಜೂ.3: ಜಿಲ್ಲೆಯ ಸಿಂಧನೂರಿನಲ್ಲಿ ಅಮೆರಿಕದ ಜಾರ್ಜ್ ಫ್ಲಾಯ್ಡ್ ಹತ್ಯೆ ಖಂಡಿಸಿ ಪ್ಲಕಾರ್ಡ್ ಹಿಡಿದು ಪ್ರತಿಭಟನೆ ನಡೆಸಲಾಯಿತು.

ಅಮೆರಿಕದ ಮಿನೆಪೊಲಿಸ್ ನಲ್ಲಿ ಜನಾಂಗೀಯ ದ್ವೇಷದಿಂದ ಪೊಲೀಸ್ ಅಧಿಕಾರಿಯೊಬ್ಬ ಕಪ್ಪು ವರ್ಣೀಯ ಜಾರ್ಜ್ ಫ್ಲಾಯ್ಡ್ ಎಂಬಾತನನ್ನು ಸಣ್ಣ ಅಪರಾಧದ ನೆಪವೊಡ್ಡಿ ಬಂಧಿಸಿ, ಹಾಡಹಗಲೇ ಕುತ್ತಿಗೆಯ ಮೇಲೆ ಮೊಣಕಾಲೂರಿ ಹತ್ಯೆ ಮಾಡುವ ಮೂಲಕ ಮೃಗೀಯತೆ ಮೆರೆದಿರುವ ಘಟನೆಯನ್ನು ಖಂಡಿಸಿ ಸಾಮ್ರಾಜ್ಯಶಾಹಿ ವಿರೋಧಿ ಒಕ್ಕೂಟದಿಂದ ಮಂಗಳವಾರ ಪ್ಲೆಕಾರ್ಡ್ ಪ್ರತಿಭಟನೆ ನಡೆಸಲಾಯಿತು.

ಈ ಸಂದರ್ಭದಲ್ಲಿ ಒಕ್ಕೂಟದ ಸಂಚಾಲಕ ಚಂದ್ರಶೇಖರ ಗೊರಬಾಳ ಮಾತನಾಡಿ, ಸಾಮ್ರಾಜ್ಯಶಾಹಿ ಶಕ್ತಿಯಾದ ಅಮೆರಿಕ ಬಡ ರಾಷ್ಟ್ರಗಳ ಮೇಲೆ ನಿರಂತರ ದೌರ್ಜನ್ಯ ನಡೆಸುತ್ತ ಬಂದಿದೆ. ಸಣ್ಣ ಕಾರಣ ನೆಪವೊಡ್ಡಿ ಕಪ್ಪು ವರ್ಣಿಯರ ಮೇಲೆ ದಾಳಿ ನಡೆಸಲಾಗುತ್ತಿದೆ ಎಂದು ಟೀಕಿಸಿದರು.

ನಂತರ ಹಿರಿಯ ಪತ್ರಕರ್ತ ಡಿ.ಎಚ್ ಕಂಬಳಿ ಮಾತನಾಡಿದರು. ಪ್ರಮುಖರಾದ ಬಾಷಮಿಯಾ, ನಾಗರಾಜ ಪೂಜಾರ್, ಬಿ.ಎನ್. ಯರದಿಹಾಳ, ಬಸವರಾಜ ಎಕ್ಕಿ, ಮಲ್ಲಿಕಾರ್ಜುನ ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News