ಕೊಡಗು: ಹೂವು ಬೆಳೆಗಾರರಿಗೆ 10.37 ಲಕ್ಷ ರೂ. ಪರಿಹಾರ

Update: 2020-06-03 11:53 GMT

ಮಡಿಕೇರಿ, ಜೂ.3: ಕೋವಿಡ್-19 ರ ಲಾಕ್ ಡೌನ್ ಹಿನ್ನೆಲೆಯಲ್ಲಿ ಸಂಕಷ್ಟಕ್ಕೊಳಗಾದ ಹೂವು ಬೆಳೆಗಾರರಿಗೆ ಪರಿಹಾರ ಧನ ನೀಡುವ ರಾಜ್ಯ ಸರಕಾರದ ಯೋಜನೆಗೆ ಜಿಲ್ಲೆಯಲ್ಲಿ ಒಟ್ಟು 136 ಅರ್ಜಿಗಳು ಸಂದಾಯವಾಗಿದ್ದು, ಈ ಪೈಕಿ 126 ಅರ್ಜಿಗಳು ಪುರಸ್ಕೃತಗೊಂಡಿವೆ

ಜಿಲ್ಲಾಧಿಕಾರಿ ಅನೀಸ್ ಕಣ್ಮಣಿ ಜಾಯ್ ಅವರು ಈ ವಿಷಯ ತಿಳಿಸಿದ್ದು, ಅರ್ಹವಿರುವ 126 ಅರ್ಜಿಗಳಿಗೆ ಸಂಬಂಧಿಸಿದಂತೆ ಒಟ್ಟು 41.482 ಹೆಕ್ಟೇರ್ ಪ್ರದೇಶಗಳಲ್ಲಿ ಹೂವು ಬೆಳೆದಿರುವುದಾಗಿ ಹೇಳಲಾಗಿದ್ದು, ಈ ಫಲಾನುಭವಿಗಳಿಗೆ ಅರ್ಹತೆ ಅನುಸಾರ ಪರಿಹಾರ ಧನವನ್ನು ನೀಡಲಾಗುವುದು ಎಂದು ವಿವರಿಸಿದ್ದಾರೆ.

ಅರ್ಹವಿರುವ ಒಟ್ಟು 126 ಪ್ರಕರಣಗಳಿಗೆ ಹೆಕ್ಟೇರಿಗೆ ಗರಿಷ್ಠ 25 ಸಾವಿರದಂತೆ ಒಟ್ಟು 10.37 ಲಕ್ಷ ರೂ.ಗಳ  ಸಹಾಯ ಧನವನ್ನು ಸಂಬಂಧಪಟ್ಟ ರೈತರ ಬ್ಯಾಂಕ್ ಖಾತೆಗಳಿಗೆ ನೇರ ವರ್ಗಾವಣೆ ಮಾಡಲು ತೋಟಗಾರಿಕೆ ಇಲಾಖೆ ವತಿಯಿಂದ ಕ್ರಮ ವಹಿಸಲಾಗುತ್ತಿದೆ ಎಂದು ಅವರು ಹೇಳಿದ್ದಾರೆ. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News