ರಾಯಚೂರು ಆರ್ ಟಿಪಿಎಸ್ 6 ವಿದ್ಯುತ್ ಉತ್ಪಾದನಾ ಘಟಕ ಸ್ಥಗಿತ

Update: 2020-06-03 15:21 GMT

ರಾಯಚೂರು, ಜೂ.3: ಕಲ್ಲಿದ್ದಲು ಆಧಾರಿತ ಶಾಖೋತ್ಪನ್ನ ಕೇಂದ್ರಗಳಿಗೆ ವಿದ್ಯುತ್ ಬೇಡಿಕೆ ಕುಸಿತದಿಂದ ರಾಯಚೂರು ತಾಲೂಕಿನ ಶಕ್ತಿ ನಗರದಲ್ಲಿರುವ ಆರ್ ಟಿಪಿಎಸ್ನ 6 ವಿದ್ಯುತ್ ಉತ್ಪಾದನಾ ಘಟಕಗಳನ್ನು ಸ್ಥಗಿತಗೊಳಿಸಲಾಗಿದೆ.

ಸದ್ಯ 2, 3, 4, 6, 7 ಹಾಗೂ 8ನೆ ವಿದ್ಯುತ್ ಉತ್ಪಾದನಾ ಘಟಕಗಳನ್ನ ಸ್ಥಗಿತಗೊಳಿಸಲಾಗಿದ್ದು, 1 ಮತ್ತು 5ನೆ ಘಟಕಗಳಿಂದ 291 ಮೆಗಾ ವ್ಯಾಟ್ ವಿದ್ಯುತ್ ಉತ್ಪಾದನೆ ಮಾಡಲಾಗುತ್ತಿದೆ. ಸದ್ಯ ಸ್ಥಗಿತಗೊಂಡ 6 ಘಟಕಗಳ ಪೈಕಿ 8ನೆ ಘಟಕ ಜನರೇಟರ್ ದೋಷದಿಂದ ಸ್ಥಗಿತವಾಗಿದೆ.

ಒಟ್ಟು 8 ಘಟಕಗಳನ್ನ ಹೊಂದಿರುವ ಆರ್ ಟಿಪಿಎಸ್ ವಿದ್ಯುತ್ ಉತ್ಪಾದನಾ ಕೇಂದ್ರ 1720 ಮೆಗಾವ್ಯಾಟ್ ವಿದ್ಯುತ್ ಉತ್ಪಾದನೆ ಸಾಮರ್ಥ್ಯ ಹೊಂದಿದೆ. 1 ರಿಂದ 7 ಘಟಕಗಳು ತಲಾ 210 ಮೆಗಾ ವ್ಯಾಟ್ ವಿದ್ಯುತ್ ಉತ್ಪಾದನೆ ಸಾಮರ್ಥ್ಯ ಹೊಂದಿದ್ದರೆ, 8ನೆ ಘಟಕ 250 ಮೆಗಾ ವ್ಯಾಟ್ ವಿದ್ಯುತ್ ಉತ್ಪಾದನೆ ಸಾಮರ್ಥ್ಯ ಹೊಂದಿದೆ.

ಜಲ ಮೂಲಗಳಿಂದ ವಿದ್ಯುತ್ ಉತ್ಪಾದನೆ ಹೆಚ್ಚಳದಿಂದಾಗಿ ಕಲ್ಲಿದ್ದಲು ಆಧಾರಿತ ಶಾಖೋತ್ಪನ್ನ ಘಟಕಗಳ ವಿದ್ಯುತ್ ಬೇಡಿಕೆ ಕುಸಿತವಾಗಿದೆ ಎಂದು ಹೇಳಲಾಗುತ್ತಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News