ಉತ್ತರ ಕನ್ನಡ ಜಿಲ್ಲೆಯ ಹಲವೆಡೆ ಭಾರೀ ಮಳೆ: ಮೀನುಗಾರಿಕೆಗೆ ತೆರಳಿದ್ದ ಬೋಟುಗಳು ವಾಪಸ್

Update: 2020-06-03 17:25 GMT

ಕಾರವಾರ, ಜೂ.3: ಜಿಲ್ಲೆಯ ಕರಾವಳಿಯಲ್ಲಿ ಭಾರೀ ಮಳೆಯಾಗಿದ್ದು, ಅಲ್ಲಲ್ಲಿ ಹಾನಿಯಾಗಿವೆ. ಕಾರವಾರದಲ್ಲಿ ಚಂಡಮಾರುತದ ವಾತಾವರಣ ಸೃಷ್ಟಿಯಾಗಿ ಕಳೆದ ಎರಡು ದಿನಗಳಿಂದ ಭಾರೀ ಮಳೆಯಾಗುತ್ತಿದ್ದು, ಮಳೆ ಮುಂದುವರಿಯುವ ಸಾಧ್ಯತೆ ಇದೆ. 

ಬುಧವಾರ ಭಾರೀ ಮಳೆಯಾಗಿದ್ದರಿಂದ ಜನ ಸಂಚಾರ ಅಸ್ತವ್ಯಸ್ತವಾಗಿದೆ. ತಾಲೂಕಿನಲ್ಲಿ ಸುರಿದ ಮಳೆಗೆ ಅನೇಕ ಪ್ರದೇಶಗಳು ಜಲಾವೃತಗೊಂಡಿದೆ. ಸಮುದ್ರದಲ್ಲಿ ಭಾರೀ ಗಾಳಿ ಸೃಷ್ಟಿಯಾಗಿದ್ದರಿಂದ ಮೀನುಗಾರಿಕೆಗೆ ತೆರಳಿದ್ದ ಬೋಟುಗಳು ವಾಪಸ್ ಬಂದಿದ್ದು ನೂರಾರು ಬೋಟುಗಳು ಬೈತಖೋಲ್ ಬಂದರಿನಲ್ಲಿ ಲಂಗರು ಹಾಕಿವೆ. 

ತಾಲೂಕಿನಲ್ಲಿ ಜೋರಾದ ಮಳೆಯ ಜೊತೆಗೆ ಭಾರೀ ಗಾಳಿ ಇದ್ದರಿಂದ ತಾಲೂಕಿನ ವಿವಿಧ ಭಾಗದಲ್ಲಿ ಮರಗಿಡಗಳು ಧರೆಗುರುಳಿದೆ. ವಿವಿಧ ಕಾರ್ಯಗಳಿಗೆ ತೆರಳಬೇಕಾದರೆ ಮಳೆಯಿಂದಾಗಿ ಸಂಚಾರಕ್ಕೂ ತೊಡಕು ಉಂಟಾಗಿತ್ತು. ರಾತ್ರಿ ವೇಳೆಯೂ ಭಾರೀ ಮಳೆಗಾಳಿ ಇದ್ದು ಇನ್ನಷ್ಟು ಮಳೆಯಾಗುವ ಸಾಧ್ಯತೆಗಳಿವೆ. 

ಸಮುದ್ರಕ್ಕಿಳಿಯದಂತೆ ಸೂಚನೆ
ಜೂನ್ 3ರವರೆಗೆ ಭಾರೀ ಮಳೆ ಗಾಳಿಯಾಗುವ ಸಾಧ್ಯತೆ ಇದೆ. ಪ್ರತಿ ಗಂಟೆಗೆ 50-60 ಕಿಮೀ. ವೇಗವಾಗಿ ಗಾಳಿ ಬೀಸುವ ಸೂಚನೆಯನ್ನು ಭಾರತೀಯ ಹವಾಮಾ ಇಲಾಖೆ ನೀಡದೆ ಎಂದು ಜಿಲ್ಲಾಧಿಕಾರಿ ಡಾ. ಹರೀಶಕುಮಾರ್ ಕೆ. ನೀಡಿದ್ದಾರೆ. ಸಮುದ್ರದ ಅಲೆಗಳು 2.6 ರಿಂದ 3.8 ಮೀಟರ್ ಎತ್ತರದವರೆಗೆ  ಉಂಟಾಗುವ ಸಾಧ್ಯತೆ ಇದೆ. ಇದರಿಂದ ಮೀನುಗಾರರು ಸಮುದ್ರಕ್ಕಿಳಿಯಂತೆ ಹಾಗೂ ಸಾರ್ವಜನಿಕರು, ಪ್ರವಾಸಿಗರು ಅಗತ್ಯ ಮುಂಜಾಗೃತಾ ಕ್ರಮಕೈಗೊಳ್ಳಲು ಕೋರಲಾಗಿದೆ. ಪ್ರಕೃತಿ ವಿಕೋಪಕ್ಕೆ ಸಂಬಂಧಿಸಿದ ಯಾವುದೇ ಸಮಸ್ಯೆಗಳಿದ್ದರೆ 1077 ಸಂಖ್ಯೆಗೆ ಕರೆ ಮಾಡುವಂತೆ ಸೂಚಿಸಿದ್ದಾರೆ. 

ಜಿಲ್ಲೆಯಲ್ಲಿ ದಾಖಲೆ ಮಳೆ
ಜಿಲ್ಲೆಯಲ್ಲಿ ಬುಧವಾರ ಒಟ್ಟು 478.7 ಮಿ.ಮೀ ಮಳೆಯಾಗಿದೆ. ಜಿಲ್ಲೆಯ ಅಂಕೋಲಾ 53.6 ಮಿ.ಮೀ. ಭಟ್ಕಳ 20 ಮಿಮೀ, ಹಳಿಯಾಳ 19.4 ಮಿಮೀ, ಹೊನ್ನಾವರ 83.3 ಮಿಮೀ, ಕಾರವಾರ 154. ಮಿಮೀ, ಕುಮಟಾ 54.5 ಮಿಮೀ, ಮುಂಡಗೋಡ 8.8 ಮಿಮೀ, ಸಿದ್ದಾಪುರ 6.4 ಮಿಮೀ, ಶಿರಸಿ 24.5 ಮಿಮೀ, ಜೋಯಿಡಾ 26.6 ಮಿಮೀ, ಯಲ್ಲಾಪುರದಲ್ಲಿ 27.6 ಮಿಮೀ ಮಳೆಯಾಗಿದೆ. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News