ಅವಧಿ ಪೂರ್ಣಗೊಂಡ ಗ್ರಾ.ಪಂ. ಗಳು ಸಭೆ-ಹಣಕಾಸಿನ ವ್ಯವಹಾರ ನಡೆಸದಂತೆ ಸರಕಾರ ಆದೇಶ

Update: 2020-06-04 14:47 GMT

ಬೆಂಗಳೂರು, ಜೂ. 4: ಅವಧಿ ಪೂರ್ಣಗೊಂಡ ಗ್ರಾಮ ಪಂಚಾಯತ್ ಗಳು ಯಾವುದೇ ಸಭೆಗಳನ್ನು ಮತ್ತು ಹಣಕಾಸಿ ವ್ಯವಹಾರಗಳನ್ನು ಮಾಡಬಾರದು ಎಂದು ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆ ಅಧೀನ ಕಾರ್ಯದರ್ಶಿ ಬಿ.ನವೀನ್ ಕುಮಾರ್ ಆದೇಶ ಹೊರಡಿಸಿದ್ದಾರೆ.

ಕರ್ನಾಟಕ ಗ್ರಾಮ ಸ್ವರಾಜ್ ಮತ್ತು ಪಂಚಾಯತ್ ರಾಜ್ ಅಧಿನಿಯಮ 1993ರ ಪ್ರಕರಣ 41ರಂತೆ ಗ್ರಾಮ ಪಂಚಾಯತ್ ಸದಸ್ಯರ ಅವಧಿಯು 5 ವರ್ಷಗಳಿಗೆ ನಿಗದಿಪಡಿಸಿದ್ದು, ಪ್ರಕರಣ 42ರಲ್ಲಿ ಗ್ರಾಮ ಪಂಚಾಯತ್ ಸದಸ್ಯರ ಹುದ್ದೆಯ ಅವಧಿಯು ಗ್ರಾಮ ಪಂಚಾಯತ್ ನ ಪ್ರಥಮ ಸಭೆಗೆ ಗೊತ್ತುಪಡಿಸಿದ ದಿನಾಂಕದಿಂದ ಪ್ರಾರಂಭವಾಗಿ 5 ವರ್ಷಗಳ ಅವಧಿಯವರೆಗೆ ಇರುತ್ತದೆ.

ಪ್ರಸ್ತುತ ಕೆಲವು ಗ್ರಾಮ ಪಂಚಾಯತ್ ಗಳ ಅವಧಿ ಪೂರ್ಣಗೊಂಡಿದ್ದು, ಅವಧಿ ಪೂರ್ಣಗೊಂಡಿರುವ ಗ್ರಾಮ ಪಂಚಾಯತ್ ಗಳು ಸರಕಾರದ ಮುಂದಿನ ನಿರ್ದೇಶನದವರೆಗೆ ಯಾವುದೇ ಸಭೆಗಳು ಮತ್ತು ಹಣಕಾಸಿನ ವ್ಯವಹಾರವನ್ನು ಮಾಡಬಾರದು ಎಂದು ಅವರು ಅಧಿಕೃತ ಆದೇಶದಲ್ಲಿ ಸೂಚನೆ ನೀಡಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News