ಭದ್ರತಾ ಮಂಡಳಿ ಚುನಾವಣೆ: ಅಭಿಯಾನ ಆರಂಭಿಸಿದ ಭಾರತ

Update: 2020-06-05 17:11 GMT

ವಿಶ್ವಸಂಸ್ಥೆ, ಜೂ. 5: ವಿಶ್ವಸಂಸ್ಥೆಯ ಭದ್ರತಾ ಮಂಡಳಿಯಲ್ಲಿನ ಚುನಾಯಿತ ಸ್ಥಾನವೊಂದನ್ನು ಭದ್ರಪಡಿಸಿಕೊಳ್ಳಲು ಭಾರತ ಶುಕ್ರವಾರ ಅಭಿಯಾನ ಆರಂಭಿಸಿದೆ. ಜಗತ್ತಿನಲ್ಲಿ ನೆಲೆಸಿರುವ ಹಳೆಯ ಮತ್ತು ಹೊಸ ಬಿಕ್ಕಟ್ಟುಗಳನ್ನು ನಿವಾರಿಸಲು ಸರ್ವಸಮ್ಮತ ಪರಿಹಾರಗಳನ್ನು ನೀಡುವ ಮೂಲಕ ಭಾರತವು ರಚನಾತ್ಮಕ ಜಾಗತಿಕ ಪಾತ್ರವನ್ನು ನಿರ್ವಹಿಸಬಹುದಾಗಿದೆ ಎಂದು ಅದು ಹೇಳಿದೆ.

ಭಾರತದ ಅಭಿಯಾನಕ್ಕೆ ಚಾಲನೆ ನೀಡಿದ ವಿದೇಶಾಂಗ ವ್ಯವಹಾರಗಳ ಸಚಿವ ಎಸ್. ಜೈಶಂಕರ್, ಭಾರತವು ವಿಶ್ವಸಂಸ್ಥೆಯ ಭದ್ರತಾ ಮಂಡಳಿಯಲ್ಲಿ ಜವಾಬ್ದಾರಿಯುತ ಹಾಗೂ ಸರ್ವಸಮ್ಮತ ಪರಿಹಾರಗಳ ಎದುರುನೋಡುತ್ತದೆ ಎಂದು ಹೇಳಿದರು. ಅಂತರ್‌ರಾಷ್ಟ್ರೀಯ ಭಯೋತ್ಪಾದನೆಗೆ ಪ್ರತಿಯಾಗಿ ಸದೃಢ ಹಾಗೂ ಫಲಿತಾಂಶ ಆಧರಿತ ಕ್ರಮಗಳು ಹಾಗೂ ಸಮಕಾಲೀನ ವಾಸ್ತವಗಳನ್ನು ಬಿಂಬಿಸುವ ಬಹುಪಕ್ಷೀಯ ಸುಧಾರಣೆಗಳನ್ನೂ ಭಾರತ ಬಯಸುತ್ತದೆ ಎಂದರು.

ವಿಶ್ವಸಂಸ್ಥೆಯ ಭದ್ರತಾ ಮಂಡಳಿಯ ಚುನಾವಣೆಗಳು ಜೂನ್ 17ರಂದು ನಡೆಯುತ್ತವೆ, ಇಲ್ಲಿ ಭಾರತ ಎರಡು ವರ್ಷಗಳ ಅವಧಿಯ ಖಾಯಮ್ ಅಲ್ಲದ ಸದಸ್ಯ ಸ್ಥಾನಕ್ಕೆ ಸ್ಪರ್ಧಿಸುತ್ತಿದ್ದು, ಏಶ್ಯ-ಪೆಸಿಫಿಕ್ ಗುಂಪಿನ ಏಕೈಕ ಅನುಮೋದಿತ ಅಭ್ಯರ್ಥಿಯಾಗಿದೆ. ಹಾಗಾಗಿ, ಭಾರತ ಅವಿರೋಧವಾಗಿ ಆಯ್ಕೆಯಾಗುವ ಎಲ್ಲ ಸಾಧ್ಯತೆಗಳಿವೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News