ಕೆಎಸ್ಸಾರ್ಟಿಸಿಯೊಂದಿಗೆ ಹಂಚಿಕೊಳ್ಳಿ ಪ್ರಯಾಣದ ಛಾಯಾಚಿತ್ರ, ಒಂದು ಸುಂದರ ಅನುಭವ

Update: 2020-06-05 18:03 GMT

ಬೆಂಗಳೂರು, ಜೂ.5: ಪ್ರಯಾಣಿಕರ ನೆಚ್ಚಿನ ಕೆಎಸ್ಸಾರ್ಟಿಸಿ ಎಂದಿನಂತೆ ಮತ್ತೆ ಸೇವೆ ಆರಂಭಿಸಿದ್ದು, ಪ್ರತಿ ಪ್ರಯಾಣವೂ ಒಂದು ಅನುಭವವೇ. ಆ ನಿಮ್ಮ ಅನುಭವ ಯಾನವನ್ನು ಈಗ ಸ್ಮರಣೀಯವಾಗಿಸಲೂ ಮುಂದಾಗಿದೆ. ಪ್ರಯಾಣಿಕರ ಪ್ರಯಾಣದ ಅನುಭವವನ್ನು ಈಗ ಕೆಎಸ್ಸಾರ್ಟಿಸಿ ಜೊತೆಗೆ ಹಂಚಿಕೊಳ್ಳಬಹುದು. ಕೆಎಸ್‍ಆರ್‍ಟಿಸಿಯಲ್ಲಿನ ನಿಮ್ಮ ಈ ಹಿಂದಿನ ಪ್ರಯಾಣದ ಒಂದು ಸುಂದರ ಅನುಭವ, ಬಸ್ಸಿನಲ್ಲಿನ ನಿಮ್ಮ ಪ್ರಯಾಣದ ಛಾಯಾಚಿತ್ರವನ್ನು ಮೇಲ್ ಮೂಲಕ pro@ksrtc.org, Facebook id:KSRTC.Karnataka ಅಥವಾ twitter id: KSRTC_Journeys ಗೆ ಕಳುಹಿಸಿಕೊಡಬಹುದಾಗಿದೆ.

ಅತ್ಯುತ್ತಮ ಬರಹವನ್ನು ಸಾರಿಗೆ ಅನುಭವಯಾನ ಎಂಬ ಶೀರ್ಷಿಕೆಯೊಂದಿಗೆ ಕೆಎಸ್‍ಆರ್‍ಟಿಸಿಯ ಫೇಸ್‍ಬುಕ್-ಟ್ವಿಟ್ಟರ್ ಖಾತೆಗಳಲ್ಲಿ ಮತ್ತು ಆಂತರಿಕ ನಿಯತಕಾಲಿಕೆಗಳಲ್ಲಿ ಪ್ರಕಟಿಸಲಾಗುವುದು ಎಂದು ಕೆಎಸ್ಸಾರ್ಟಿಸಿ ವ್ಯವಸ್ಥಾಪಕ ನಿರ್ದೇಶಕ ಶಿವಯೋಗಿ ಸಿ. ಕಳಸದ ಪ್ರಕಟನೆಯಲ್ಲಿ ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News