ಬಳ್ಳಾರಿ: ಮೂವರು ಪೊಲೀಸ್ ಸಿಬ್ಬಂದಿಗೆ ಕೊರೋನ ಸೋಂಕು ದೃಢ

Update: 2020-06-07 13:01 GMT

ಬಳ್ಳಾರಿ, ಜೂ.7: ಬಳ್ಳಾರಿ ಜಿಲ್ಲಾ ವ್ಯಾಪ್ತಿಯ ಮೂವರು ಪೊಲೀಸ್ ಸಿಬ್ಬಂದಿಗೆ ಕೊರೋನ ಸೋಂಕು ದೃಢಪಟ್ಟಿದೆ.

ಇಲ್ಲಿನ ಟಿ.ಬಿ.ಡ್ಯಾಂ ಠಾಣೆಯ ಸಿಪಿಐ, ಹೊಸಪೇಟೆ ಪಟ್ಟಣ ಠಾಣೆ ಮತ್ತು ಮರಿಯಮ್ಮನ ಹಳ್ಳಿ ಠಾಣೆಯ ಪೊಲೀಸ್ ಕಾನ್‍ಸ್ಟೇಬಲ್‍ ಗಳಿಗೆ ಸೋಂಕು ತಗಲಿದ್ದು, ಈ ಮೂವರನ್ನು ಬಳ್ಳಾರಿಯ ಜಿಲ್ಲಾ  ಕೋವಿಡ್ ಆಸ್ಪತ್ರೆಗೆ ಚಿಕಿತ್ಸೆ ನೀಡಲಾಗುತ್ತಿದೆ ಎಂದು ವರದಿಯಾಗಿದೆ.

ಪೊಲೀಸರೊಂದಿಗೆ ಸಂಪರ್ಕದಲ್ಲಿರುವವರನ್ನು ಕ್ವಾರಂಟೈನ್ ಮಾಡುವ ಕಾರ್ಯ ನಡೆದಿದೆ. ಒಟ್ಟು ಬಳ್ಳಾರಿಯಲ್ಲಿ ಶನಿವಾರ ಆರು ಜನರಲ್ಲಿ ಪಾಸಿಟಿವ್ ಕಾಣಿಸಿಕೊಂಡಿದೆ. ಇದರಿಂದ ಜಿಲ್ಲೆಯಲ್ಲಿ ಈವರೆಗೆ ಕೊರೋನ ಧೃಡಪಟ್ಟವರ ಸಂಖ್ಯೆ 60ಕ್ಕೇರಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News