ರಾಜ್ಯದಲ್ಲಿ ಆತ್ಮನಿರ್ಭರ ಯೋಜನೆಯಡಿ 4.82 ಲಕ್ಷ ಜನರಿಗೆ ರೇಷನ್ ವಿತರಣೆ
ಬೆಂಗಳೂರು, ಜೂ.9: ಕೇಂದ್ರ ಸರಕಾರ ಜಾರಿಗೆ ತಂದಿರುವ ಆತ್ಮನಿರ್ಭರ ಭಾರತ ಯೋಜನೆ ಅಡಿಯಲ್ಲಿ ರಾಜ್ಯದಲ್ಲಿ ಈವರೆಗೂ 4,82,972 ಜನರಿಗೆ ರೇಷನ್ ವಿತರಿಸಲಾಗಿದೆ ಎಂದು ಆಹಾರ ಇಲಾಖೆ ಮಾಹಿತಿ ನೀಡಿದೆ.
ರಾಜ್ಯದ ಬೇರೆ ಜಿಲ್ಲೆಗಳಿಗೆ ಹೋಲಿಸಿದರೆ ಬೆಂಗಳೂರು ನಗರದಲ್ಲಿಯೇ ಅತಿಹೆಚ್ಚು ವಲಸಿಗರು ಪಡಿತರ ಪಡೆದಿದ್ದಾರೆ. ಈ ಜಿಲ್ಲೆ ಹೊರತುಪಡಿಸಿ ಉಳಿದ ಜಿಲ್ಲೆಗಳಲ್ಲಿ ಈ ಯೋಜನೆ ಪರಿಣಾಮಕಾರಿಯಾಗಿ ಜಾರಿಯಾಗಿಲ್ಲ.
ಚಾಮರಾಜನಗರ, ಚಿಕ್ಕಮಗಳೂರು, ಗದಗ, ದಾವಣಗೆರೆ, ಧಾರವಾಡ, ಕಲಬುರಗಿ, ಕೊಡಗು, ಕೊಪ್ಪಳ ಹಾಗೂ ಶಿವಮೊಗ್ಗದಲ್ಲಿ ಅತಿಕಡಿಮೆ ವಲಸಿಗರು ರೇಷನ್ ಪಡೆದಿದ್ದಾರೆ. ರೇಷನ್ ಕಾರ್ಡ್ ಇಲ್ಲದ ವಲಸಿಗರು ಎರಡು ತಿಂಗಳುಗಳ ಕಾಲ ಪ್ರತಿಯೊಬ್ಬರಿಗೂ ಉಚಿತವಾಗಿ ಐದು ಕೆಜಿ ಅಕ್ಕಿ ಹಾಗೂ ಒಂದು ಕೆಜಿ ಕಡಲೇಕಾಳು ಪಡೆಯಬಹುದು ಎಂದು ಕೇಂದ್ರ ಸರಕಾರ ಘೋಷಣೆ ಮಾಡಿತ್ತು.
ಜಿಲ್ಲಾವಾರು ವಿವರ: ಬೆಂಗಳೂರು ನಗರ 4,45,843, ಬಳ್ಳಾರಿ 8,022, ಬೆಂಗಳೂರು ಗ್ರಾಮಾಂತರ 13,462, ಯಾದಗಿರಿ 3,599, ಚಿಕ್ಕಬಳ್ಳಾಪುರ 2,853, ಬೀದರ್ 1,472, ಮಂಡ್ಯ 954, ರಾಮನಗರ 988, ಮೈಸೂರು 858, ರಾಯಚೂರು 738, ಹಾಸನ 701, ಬೆಳಗಾವಿ 654.
ಚಿತ್ರದುರ್ಗ 517, ಬಾಗಲಕೋಟೆ 506, ದಕ್ಷಿಣ ಕನ್ನಡ 343, ಹಾವೇರಿ 292, ಉತ್ತರ ಕನ್ನಡ 199, ಕೋಲಾರ 178, ಉಡುಪಿ 105, ತುಮಕೂರು 104, ಧಾರವಾಡ 66, ಶಿವಮೊಗ್ಗ 63, ದಾವಣಗೆರೆ 63, ಕೊಡಗು 37, ಚಾಮರಾಜನಗರ 29, ಚಿಕ್ಕಮಗಳೂರು 16, ಗದಗ 15, ಕೊಪ್ಪಳ 13 ಹಾಗೂ ಕಲಬುರಗಿಯಲ್ಲಿ ನಾಲ್ಕು ಜನರು ಈ ಯೋಜನೆಯಡಿ ಸೌಲಭ್ಯ ಪಡೆದಿದ್ದಾರೆ.