×
Ad

ಕಂಟೈನ್ಮೆಂಟ್ ವಲಯದ ಶಿಕ್ಷಕರಿಗೆ ಕರ್ತವ್ಯದಲ್ಲಿ ವಿನಾಯಿತಿ ನೀಡಿದ ಶಿಕ್ಷಣ ಇಲಾಖೆ

Update: 2020-06-09 17:35 IST

ಬೆಂಗಳೂರು, ಜೂ.9: ಕಂಟೈನ್ಮೆಂಟ್ ವಲಯ ಹಾಗೂ ಕ್ವಾರಂಟೈನ್ ಸೆಂಟರ್ ವ್ಯಾಪ್ತಿಯಲ್ಲಿರುವ ಶಾಲೆಗಳಲ್ಲಿ ಕಾರ್ಯ ನಿರ್ವಹಿಸುವ ಶಿಕ್ಷಕರಿಗೆ ಶಾಲಾ ಕರ್ತವ್ಯಕ್ಕಾಗಿ ಶಾಲೆಗೆ ಹಾಜರಾಗುವುದಕ್ಕೆ ಶಿಕ್ಷಣ ಇಲಾಖೆ ವಿನಾಯಿತಿ ನೀಡಿದೆ.

ರಾಜ್ಯದ ಎಲ್ಲ ಪ್ರಾಥಮಿಕ ಹಾಗೂ ಪ್ರೌಢ ಶಾಲಾ ಶಿಕ್ಷಕರು ಸೋಮವಾರದಿಂದಲೇ ಶಾಲೆಗೆ ಹಾಜರಾಗುವಂತೆ ಸೂಚನೆ ನೀಡಲಾಗಿತ್ತು. ಅಲ್ಲದೆ, ಈ ಶಿಕ್ಷಕರು ಜೂ.10 ರಿಂದ 12 ರವರೆಗೆ ಸರಕಾರಿ ಶಾಲೆಗಳಲ್ಲಿ ಪಾಲಕರು ಮತ್ತು ಎಸ್‍ಡಿಎಂಸಿ ಸದಸ್ಯರ ಜತೆ ಸಭೆ ನಡೆಸಿ ಶಾಲಾ ಆರಂಭದ ಬಗ್ಗೆ ಅಭಿಪ್ರಾಯ ಸಂಗ್ರಹಿಸುವಂತೆಯೂ ಸೂಚಿಸಿತ್ತು.

ಆದರೆ, ಕೆಲವು ಪ್ರದೇಶಗಳನ್ನು ಕಂಟೈನ್ಮೆಂಟ್ ಝೋನ್, ಕ್ವಾರಂಟೈನ್ ಸೆಂಟರ್ ಎಂದು ರಾಜ್ಯ ಸರಕಾರ ಘೋಷಣೆ ಮಾಡಿರುವುದರಿಂದ ಆ ವಲಯದಲ್ಲಿ ಕರ್ತವ್ಯ ನಿರ್ವಹಿಸುವ ಶಿಕ್ಷಕರಿಗೆ ವಿನಾಯಿತಿ ನೀಡಿ ಕೆಲವು ಮಾರ್ಗಸೂಚಿಗಳನ್ನು ಹೊರಡಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News