×
Ad

ಚಿಕ್ಕಮಗಳೂರು: ವಿಷ ಬೆರೆಸಿದ್ದ ಹಲಸಿನ ಹಣ್ಣು ತಿಂದು ಮೂರು ದನಗಳು ಸಾವು

Update: 2020-06-09 23:16 IST

ಚಿಕ್ಕಮಗಳೂರು, ಜೂ, 9: ವಿಷ ಬೆರೆಸಿದ್ದ ಹಲಸಿನ ಹಣ್ಣುಗಳನ್ನು ತಿಂದು ಮೂರು ದನಗಳು ಸಾವನ್ನಪ್ಪಿದ ಘಟನೆ ಚಿಕ್ಕಮಗಳೂರು ತಾಲೂಕಿನ ಬಸರವಳ್ಳಿಯಲ್ಲಿ ನಡೆದಿದೆ.

ಕಿಟ್ಟೆಗೌಡ, ಮಧು ಎಂಬುವರಿಗೆ ಸೇರಿದ ಮೂರು ದನಗಳು ಸಾವನ್ನಪ್ಪಿದೆ. ವಿಷ ಬೆರೆಸಿದ್ದ ಹಲಸಿನ ಹಣ್ಣುಗಳನ್ನು ತಿಂದು ದನಗಳು ಸಾವನ್ನಪ್ಪಿವೆ ಎಂದು ತಿಳಿದುಬಂದಿದೆ.

ತೋಟಕ್ಕೆ ದನಗಳು ನುಗ್ಗುತ್ತವೆಂದು ಹಲಸಿನ ಹಣ್ಣುಗಳಲ್ಲಿ ವಿಷ ಬೆರೆಸಿ, ಅದನ್ನು ದನಗಳಿಗೆ ನೀಡಲಾಗಿದೆ ಎಂದು ಆರೋಪಿಸಲಾಗಿದೆ.

ಘಟನೆ ಸಂಬಂಧ ಆಲ್ದೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News