ಕ್ವಾರಂಟೈನ್ ತಪ್ಪಿಸಲು ವಿಶಿಷ್ಟ ರೀತಿಯಲ್ಲಿ ವಿವಾಹವಾದ ಕೇರಳ-ತಮಿಳುನಾಡಿನ ಜೋಡಿ!

Update: 2020-06-09 18:18 GMT

ಕೊಚ್ಚಿ: ಕೊರೋನ ವೈರಸ್ ಭೀತಿ, ಲಾಕ್ ಡೌನ್ ಗಳ ನಡುವೆ ಕೇರಳದ ಇಡುಕ್ಕಿ ಜಿಲ್ಲೆಯ ಚಿನ್ನಾರ್ ಚೆಕ್ ಪೋಸ್ಟ್ ವಿಶಿಷ್ಠ ಮದುವೆಯೊಂದಕ್ಕೆ ಸಾಕ್ಷಿಯಾಗಿದೆ. ಆ ದಿನ ಅರಣ್ಯಾಧಿಕಾರಿಗಳು ವಾಹನಗಳ ತಪಾಸಣೆ ನಡೆಸದೆ ಯುವಜೋಡಿಯ ವಿವಾಹ ಸುಸೂತ್ರವಾಗಿ ನೆರವೇರುವಂತೆ ನೋಡಿಕೊಂಡರು.

ಅಧಿಕಾರಿಗಳು ಚೆಕ್ ಪೋಸ್ಟ್ ನಲ್ಲಿ ಕಾಯುತ್ತಿದ್ದಾಗ ವರ ರಾಬಿನ್ ಸನ್ ತಮಿಳುನಾಡು ಗಡಿಯಿಂದ ನಡೆದುಕೊಂಡು ಬಂದರೆ, ವಧು ಪ್ರಿಯಾಂಕಾ ಕೇರಳದ ಗಡಿಯಿಂದ ನಡೆದುಕೊಂಡು ಬಂದರು. ಇಬ್ಬರು ಸುರಕ್ಷಿತಾ ಕ್ರಮವಾಗಿ ಮಾಸ್ಕ್ ಗಳನ್ನು ಧರಿಸಿದ್ದರು.

ಒಂದು ರಾಜ್ಯದಿಂದ ಮತ್ತೊಂದು ರಾಜ್ಯಕ್ಕೆ ಎರಡೂ ಕುಟುಂಬಗಳ ಸದಸ್ಯರು ಸದ್ಯದ ಪರಿಸ್ಥಿತಿಯಲ್ಲಿ ತೆರಳಲು ಸಾಧ್ಯವಿಲ್ಲದ ಮತ್ತು ಒಂದು ವೇಳೆ ಹೋದರೆ 2 ವಾರಗಳ ಕಾಲ ಕ್ವಾರಂಟೈನ್ ನಲ್ಲಿರಬೇಕಾಗಿರುವ ಕಾರಣ ಗಡಿಭಾಗದ ರಸ್ತೆಯಲ್ಲಿ ಈ ವಿಶೇಷ ವಿವಾಹ ನೆರವೇರಿತು.

ಇಡುಕ್ಕಿಯ ಚಿನ್ನಾರ್ ನ ಅಬಕಾರಿ ಚೆಕ್ ಪೋಸ್ಟ್ ಮುಂಭಾಗ ಈ ಜೋಡಿಯ ವಿವಾಹ ನೆರವೇರಿತು. ಸ್ವತಃ ಅಧಿಕಾರಿಗಳೇ ಹಣ್ಣು ಹಂಪಲುಗಳು ಮತ್ತು ದೀಪಗಳ ವ್ಯವಸ್ಥೆಗಳನ್ನು ಮತ್ತು ಸುರಕ್ಷತಾ ವ್ಯವಸ್ಥೆಗಳನ್ನು ಮಾಡಿದ್ದರು. ಸುರಕ್ಷಿತ ಅಂತರ ಕಾಪಾಡುವ ದೃಷ್ಟಿಯಿಂದ ಎರಡು ಕುಟುಂಬಗಳ ಸದಸ್ಯರು ವಧು ವರರಿಂದ ದೂರದಲ್ಲಿ ನಿಂತಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News