ಹಾಸನ: ಅನಾರೋಗ್ಯದಿಂದ ವೈದ್ಯ ಸಾವು

Update: 2020-06-11 15:02 GMT

ಹಾಸನ, ಜೂ.10: ಕಳೆದ ಮೂರು ತಿಂಗಳಿನಿಂದ ಕೊರೋನ ವಿರುದ್ಧ ಕೆಲಸ ನಿರ್ವಹಿಸುತ್ತಿದ್ದ ವೈದ್ಯರೋರ್ವರು ಅನಾರೋಗ್ಯದಿಂದ ಸಾವನ್ನಪ್ಪಿರುವ ಘಟನೆ ನಡೆದಿದೆ.

ದಾವಣಗೆರೆ ಮೂಲದ ಡಾ. ಶಿವಕಿರಣ್ (44) ಸಾವನಪ್ಪಿದವರು. ಇವರು ಆಲೂರು ತಾಲೂಕಿನ ಸರಕಾರಿ ಆಸ್ಪತ್ರೆಯಲ್ಲಿ ಕಳೆದ ನಾಲ್ಕು ವರ್ಷಗಳಿಂದ ಕೆಲಸ ಮಾಡುತ್ತಿದ್ದರು. ಕೆಲ ದಿನಗಳ ಹಿಂದೆ ತೀವ್ರ ತಲೆನೋವಿನಿಂದ ಬಳಲಿ ಕರ್ತವ್ಯದ ವೇಳೆ ಪ್ಯಾರಾಲಿಸಿಸ್ ಸ್ಟ್ರೋಕ್ ಆಗಿ ಕುಸಿದು ಬಿದ್ದಿದ್ದರು. ನಂತರ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. 5 ದಿನ ವೆಂಟಿಲೇಶನ್ ನಲ್ಲಿ ಇಡಲಾಗಿತ್ತು. ಬುಧವಾರ ಬೆಳಗ್ಗೆ ಚಿಕಿತ್ಸೆ ಫಲಕಾರಿಯಾಗದೆ ಕೊನೆಯುಸಿರು ಎಳೆದಿದ್ದಾರೆ.

ವೈದ್ಯರಲ್ಲಿ ಯಾವುದೇ ಕೊರೋನ ಲಕ್ಷಣ ಕಂಡು ಬಂದಿಲ್ಲ ಎಂದು ಜಿಲ್ಲಾ ಆರೋಗ್ಯಾಧಿಕಾರಿ ಡಾ.ಸತೀಶ್ ತಿಳಿಸಿದ್ದಾರೆ.

ಹಾಸನ ನಗರದ ಜಿಲ್ಲಾ ಸರಕಾರಿ ಹಳೆ ಆಸ್ಪತ್ರೆ ಬಳಿ ಮೃತದೇಹವನ್ನು ತುರ್ತು ವಾಹನದಲ್ಲಿ ತಂದು, ಸಾರ್ವಜನಿಕರ ದರ್ಶನಕ್ಕೆ ಇಡಲಾಗಿತ್ತು. ಸ್ಥಳಕ್ಕೆ ಜಿಲ್ಲಾಧಿಕಾರಿ ಆರ್. ಗಿರೀಶ್ ಆಗಮಿಸಿ ಅಂತಿಮ ನಮನ ಸಲ್ಲಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News