×
Ad

ಶಹಾಪುರ: ಲಾರಿಗಳ ನಡುವೆ ಅಪಘಾತ; ಚಾಲಕನಿಗೆ ಗಾಯ

Update: 2020-06-11 10:54 IST

ಶಹಾಪುರ, ಜೂ.11: ನಿಂತಿರುವ ಲಾರಿಯೊಂದಕ್ಕೆ ಹಿಂಬದಿಯಿಂದ ಲಾರಿಯೊಂದು ಢಿಕ್ಕಿ ಹೊಡೆದಿರುವ ಘಟನೆ ಗುರುವಾರ ಬೆಳಗ್ಗೆ 4 ಗಂಟೆಯ ಸುಮಾರಿಗೆ ಶಹಾಪುರ ಪಟ್ಟಣದ ಹೊಸ ಬಸ್ ನಿಲ್ದಾಣದ ಬಳಿ ನಡೆದಿದೆ.

ಇದರಿಂದ ಢಿಕ್ಕಿಯಾದ ಲಾರಿಯ ಚಾಲಕನಿಗೆ ಕಾಲಿಗೆ ಗಂಭೀರ ಸ್ವರೂಪದ ಗಾಯಗಳಾಗಿವೆ ಎಂದು ತಿಳಿದು ಬಂದಿದೆ. ಲಾರಿಯ ಮುಂಭಾಗ ಜಖಂಗೊಂಡಿದೆ.

ಲಾರಿಯ ಎಕ್ಸೆಲ್ ಕಟ್ಟಾಗಿದ್ದರಿಂದ ಈ ಅಪಘಾತ ಸಂಭವಿಸಿದೆ ಎಂದು ತಿಳಿದುಬಂದಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News