×
Ad

ಪಿಜಿಸಿಇಟಿ-2020 ಪರೀಕ್ಷೆ ವೇಳಾಪಟ್ಟಿ ಪ್ರಕಟ

Update: 2020-06-11 22:17 IST

ಬೆಂಗಳೂರು, ಜೂ.11: 2020ನೇ ಸಾಲಿನ ಎಂಬಿಎ, ಎಂಸಿಎ, ಎಂಇ, ಎಂಟೆಕ್, ಎಂ.ಆರ್ಕ್ ಕೋರ್ಸುಗಳ ಪ್ರವೇಶಾತಿಗೆ ಪಿಜಿಸಿಇಟಿ ಪರೀಕ್ಷೆಯನ್ನು ಆಗಸ್ಟ್ 8 ಮತ್ತು 9ರಂದು ನಡೆಸಲಾಗುವುದು ಎಂದು ರಾಜ್ಯ ಪರೀಕ್ಷಾ ಪ್ರಾಧಿಕಾರದ ಕಾರ್ಯನಿರ್ವಾಹಕ ನಿದೇರ್ಶಕರು ತಿಳಿಸಿದ್ದಾರೆ.

ಅರ್ಹ ಅಭ್ಯರ್ಥಿಗಳು ಅರ್ಜಿಗಳನ್ನು ಆನ್‍ಲೈನ್‍ನಲ್ಲಿ ಜೂ.15 ರಿಂದ 28ರವರೆಗೆ ದಾಖಲಿಸಿ, ಜೂ.30ರೊಳಗಾಗಿ ಶುಲ್ಕವನ್ನು ಪಾವತಿಸಬಹುದು. ಅಭ್ಯರ್ಥಿಗಳಿಗೆ ಪಿಜಿಸಿಇಟಿ-2020ರ ಪರೀಕ್ಷೆಗೆ ಸಂಬಂಧಿಸಿದ ವಿವರವಾದ ಮಾಹಿತಿಯನ್ನು ಪ್ರಾಧಿಕಾರದ ವೆಬ್‍ಸೈಟ್ http://kea.kar.nic.in ನಲ್ಲಿ ಪ್ರಕಟಿಸಲಾಗಿದೆ.

ಎಂ.ಇ ಕೋರ್ಸ್‍ನ ಟೈಪ್-ಬಿ ಗಣಿತ ಮತ್ತು ಕಂಪ್ಯೂಟರ್ ಸೈನ್ಸ್(ದಾವಣಗೆರೆ ಮತ್ತು ಮೈಸೂರಿನಲ್ಲಿ ಮಾತ್ರ) ಪರೀಕ್ಷೆಗಳನ್ನು 100 ಅಂಕಗಳಿಗಾಗಿ ಆಗಸ್ಟ್ 8ರಂದು ಬೆಳಗ್ಗೆ 10.30ರಿಂದ ಮಧ್ಯಾಹ್ನ 12.30ರವರೆಗೆ ನಡೆಸಲಾಗುವುದು. ಟೈಪ್-ಎ ಮಾದರಿಯಲ್ಲಿ ವಿಟಿಯು, ಯುವಿಸಿಇ, ಯುಬಿಡಿಟಿಸಿಇ ಪ್ರಸ್ತಾವಿಸುವ ಕೋರ್ಸ್‍ಗಳ ಪರೀಕ್ಷೆಯು 100 ಅಂಕಗಳಿಗಾಗಿ ಮಧ್ಯಾಹ್ನ 2.30ರಿಂದ 4.30ರವರೆಗೆ ನಡೆಯಲಿದೆ.

ಆಗಸ್ಟ್ 9ರಂದು ಬೆಳಗ್ಗೆ 10.30 ರಿಂದ ಮಧ್ಯಾಹ್ನ 12.30ರವರೆಗೆ 100 ಅಂಕಗಳಿಗೆ ಮೊದಲ ವರ್ಷದ(ಮೊದಲ ಸೆಮಿಸ್ಟರ್) ಎಂಸಿಎ ದಾಖಲಾತಿ ಹಾಗೂ ಮಧ್ಯಾಹ್ನ 2.30 ರಿಂದ ಸಂಜೆ 4.30ರವರೆಗೆ ಮೊದಲ ವರ್ಷದ(ಮೊದಲ ಸೆಮಿಸ್ಟರ್) ಎಂಬಿಎ ದಾಖಲಾತಿಗಾಗಿ 100 ಅಂಕಗಳ ಪರೀಕ್ಷೆ ನಡೆಯಲಿದೆ.

ಡಿಸಿಇಟಿ-2020: 2020ನೆ ಸಾಲಿನ ಎರಡನೆ ವರ್ಷದ/ಮೂರನೆ ಸೆಮಿಸ್ಟರ್ ಇಂಜಿನಿಯರಿಂಗ್ ಕೋರ್ಸುಗಳ ಲ್ಯಾಟರಲ್ ಪ್ರವೇಶಾತಿಗೆ ಡಿಸಿಇಟಿ ಪ್ರವೇಶ ಪರೀಕ್ಷೆಯನ್ನು ಆಗಸ್ಟ್ 9ರಂದು ನಡೆಸಲಾಗುವುದು. ಅರ್ಹ ಅಭ್ಯರ್ಥಿಗಳು ಅರ್ಜಿಗಳನ್ನು ಆನ್‍ಲೈನ್‍ನಲ್ಲಿ ಜೂ.16ರಿಂದ 30ರವರೆಗೆ ದಾಖಲಿಸಿ ಜು.2ರೊಳಗಾಗಿ ಶುಲ್ಕವನ್ನು ಪಾವತಿಸಬಹುದು. ಡಿಸಿಇಟಿ-2020ರ ಪರೀಕ್ಷೆಗೆ ಸಂಬಂಧಿಸಿದ ವಿವರವಾದ ಮಾಹಿತಿಯನ್ನು ಪ್ರಾಧಿಕಾರದ ವೆಬ್‍ಸೈಟ್ http://kea.kar.nic.in ನಲ್ಲಿ ಪ್ರಕಟಿಸಲಾಗಿದೆ.

2020ರ ಡಿಪ್ಲೊಮಾ ಸಾಮಾನ್ಯ ಪ್ರವೇಶ ಪರೀಕ್ಷೆಯ ವೇಳಾಪಟ್ಟಿ: ಆಗಸ್ಟ್ 9ರಂದು ಬೆಳಗ್ಗೆ 10 ರಿಂದ ಮಧ್ಯಾಹ್ನ 1 ಗಂಟೆಯವರೆಗೆ 180 ಅಂಕಗಳಿಗೆ ಪರೀಕ್ಷೆ ನಡೆಯಲಿದೆ. ಮಧ್ಯಾಹ್ನ 3 ರಿಂದ 4 ಗಂಟೆಯವರೆಗೆ ಹೊರನಾಡು ಮತ್ತು ಗಡಿನಾಡು ಕನ್ನಡಿಗರಿಗೆ 50 ಅಂಕಗಳಿಗೆ ಕನ್ನಡ ಭಾಷಾ ಪರೀಕ್ಷೆ(ಬೆಂಗಳೂರಿನಲ್ಲಿ ಮಾತ್ರ) ನಡೆಯಲಿದೆ ಎಂದು ಪ್ರಕಟಣೆ ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News