×
Ad

ರಾಜ್ಯದಲ್ಲಿ ಮುಂದುವರಿದ ಎಸಿಬಿ ದಾಳಿ: ಅಧಿಕಾರಿಗಳಿಬ್ಬರ ಬಳಿ ಕೋಟಿ ಕೋಟಿ ಆಸ್ತಿ ಪತ್ತೆ

Update: 2020-06-12 18:15 IST

ಬೆಂಗಳೂರು, ಜೂ.12: ಕೆಎಐಡಿಬಿಯ ವಿಶೇಷ ಭೂಸ್ವಾಧೀನಾಧಿಕಾರಿ ದಾಸೇಗೌಡ ಹಾಗೂ ನಗರ ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿ, ಬಾಗಲಕೋಟೆ ಇದರ ಸಹಾಯಕ ಕಾರ್ಯನಿರ್ವಾಹಕ ಅಭಿಯಂತರ ಹನುಮಪ್ಪ ಹಂದಪ್ಪ ಪ್ರಭಣ್ಣವರ ಕಚೇರಿ ಹಾಗೂ ಮನೆ ಮೇಲೆ ಭ್ರಷ್ಟಾಚಾರ ನಿಗ್ರಹ ದಳ(ಎಸಿಬಿ) ಅಧಿಕಾರಿಗಳು ದಾಳಿ ನಡೆಸಿ, ಕೋಟ್ಯಂತರ ರೂ. ಆಸ್ತಿ ದಾಖಲೆ ಪತ್ರಗಳನ್ನು ಪತ್ತೆಹಚ್ಚಿದ್ದಾರೆ.

ಅಮಾನತ್ತಿನಲ್ಲಿರುವ ಕೆಐಎಡಿಬಿ ಮಂಗಳೂರಿನ ದಾಸೇಗೌಡ ಹಾಗೂ ಬಾಗಲಕೋಟೆಯ ಹನುಮಪ್ಪ ಹಂದಪ್ಪ ಪ್ರಭಣ್ಣವರ ಕಚೇರಿ, ಮನೆ ಸೇರಿ 6 ಕಡೆಗಳಲ್ಲಿ ಶುಕ್ರವಾರ ಏಕಕಾಲಕ್ಕೆ ದಾಳಿ ನಡೆಸಲಾಗಿದ್ದು, ಚರ ಮತ್ತು ಸ್ಥಿರ ಆಸ್ತಿಗಳ ವಿವರ ಬೆಳಕಿಗೆ ಬಂದಿದೆ ಎಂದು ಎಸಿಬಿ ತಿಳಿಸಿದೆ.

ಆಸ್ತಿ ಎಷ್ಟು?: ಹನುಮಪ್ಪ ಹಂದಪ್ಪ ಪ್ರಭಣ್ಣವರ ಬಳಿ ಗದಗದಲ್ಲಿ ಒಂದು ಮನೆ, 12 ನಿವೇಶನ, ಬರೋಬ್ಬರಿ 25 ಎಕರೆ ಕೃಷಿ ಭೂಮಿ, 367 ಗ್ರಾಂ ಚಿನ್ನ, 1.629 ಕೆಜಿ ಬೆಳ್ಳಿ, 40 ಜೀವಾ ವಿಮಾ ಬಾಂಡ್, 1 ಲಕ್ಷ ನಗದು, ವಿವಿಧ ಬ್ಯಾಂಕ್‍ಗಳಲ್ಲಿ 4.7 ಲಕ್ಷ ರೂ. ಠೇವಣಿ ಹಾಗೂ 12 ಲಕ್ಷ ರೂ. ಮೌಲ್ಯದ ಗೃಹಪಯೋಗಿ ವಸ್ತುಗಳು ಪತ್ತೆಯಾಗಿವೆ.

ಅದೇ ರೀತಿ, ಲಂಚ ಸ್ವೀಕರಿಸಿ ಅಮಾನತ್ತಿನಲ್ಲಿರುವ ದಾಸೇಗೌಡ ಅವರ ಬಳಿ ಮಂಡ್ಯ ನಗರದಲ್ಲಿ ಒಂದು ಮನೆ, 8 ನಿವೇಶನ, 580ಗ್ರಾಂ ಚಿನ್ನ, 6.600 ಕೆಜಿ ಬೆಳ್ಳಿ, ಕಾರು, ಮೂರು ಬೈಕ್, ಒಂದು ಬ್ಯಾಂಕ್ ಲಾಕರ್, ವಿವಿಧ ಬ್ಯಾಂಕ್‍ಗಳಲ್ಲಿ 10 ಲಕ್ಷ ರೂ.ಠೇವಣಿ ಹಾಗೂ 15 ಲಕ್ಷ ರೂ. ಮೌಲ್ಯದ ಗೃಹಪಯೋಗಿ ವಸ್ತುಗಳಿರುವುದು ಬೆಳಕಿಗೆ ಬಂದಿದ್ದು, ಈ ಸಂಬಂಧ ತನಿಖೆ ಮುಂದುವರೆಸಲಾಗಿದೆ ಎಂದು ಎಸಿಬಿ ಮೂಲಗಳು ತಿಳಿಸಿವೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News