×
Ad

ಮೈಸೂರಿನಲ್ಲಿ ಶ್ವಾನಗಳ ಮಾರಣಹೋಮ: ವಿಷ ಹಾಕಿ ಸಾಯಿಸಿರುವ ಶಂಕೆ

Update: 2020-06-12 22:10 IST
ಸಾಂದರ್ಭಿಕ ಚಿತ್ರ

ಮೈಸೂರು,ಜೂ.12: ಕೇರಳದಲ್ಲಿ ಸಿಡಿಮದ್ದಿನಿಂದ ಆನೆ ಸಾವಿಗೀಡಾದ ಘಟನೆ ಮಾಸುವ ಮುಂಚೆಯೇ ಮೈಸೂರಿನಲ್ಲಿ ಶ್ವಾನಗಳ ಮಾರಣಹೋಮ ನಡೆದಿದೆ.

ಮೈಸೂರಿನಲ್ಲಿ ಶ್ವಾನಗಳು ಅನುಮಾನಾಸ್ಪದವಾಗಿ ಸಾವಿಗೀಡಾಗುತ್ತಿರುವ ಪ್ರಕರಣ ಬೆಳಕಿಗೆ ಬಂದಿದ್ದು, ನಗರದ ಟಿ.ಕೆ ಲೇಔಟ್, ರಾಜೀವ್ ನಗರ ವ್ಯಾಪ್ತಿಯಲ್ಲಿ 10ಕ್ಕೂ ಹೆಚ್ಚು ನಾಯಿಗಳು ಸಾವನ್ನಪ್ಪಿರುವ ಘಟನೆ ನಡೆದಿದೆ. ನಾಯಿಗಳಿಗೆ ವಿಷ ಹಾಕಿ ಸಾಯಿಸಿರುವ ಶಂಕೆ ವ್ಯಕ್ತವಾಗಿದೆ.

ಇನ್ನು ಸಾವಿಗೀಡಾದ ಶ್ವಾನಗಳ ಕಳೇಬರವನ್ನು ಮೈಸೂರು ಮಹಾನಗರ ಪಾಲಿಕೆ ಸಿಬ್ಬಂದಿ ರವಾನೆ ಮಾಡಿದ್ದಾರೆ. ನಾಯಿಗಳ ಮೃತದೇಹದ ಮಾದರಿ ಪ್ರಯೋಗಾಲಯಕ್ಕೆ ರವಾನೆಯಾಗಿದೆ. ವರದಿ ಬಂದ ಬಳಿಕ ಸತ್ಯಾಂಶ ಹೊರ ಬರಲಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News