×
Ad

ಕೊಪ್ಪ ಮುಹಿಯುದ್ದೀನ್ ಜುಮಾ ಮಸೀದಿಯಲ್ಲಿ ಬಕ್ರೀದ್‌ವರೆಗೆ ಸಾಮೂಹಿಕ ನಮಾಝ್ ನಿರ್ವಹಿಸದಿರಲು ನಿರ್ಧಾರ

Update: 2020-06-13 13:19 IST

ಕೊಪ್ಪ, ಜೂ.13: ಇಲ್ಲಿನ ಕೆಳಪೇಟೆ ಕೆಸುವೆ ರಸ್ತೆಯಲ್ಲಿರುವ ಮುಹಿಯುದ್ದೀನ್ ಜುಮಾ ಮಸೀದಿಯಲ್ಲಿ ಮುಂಬರುವ ಬಕ್ರೀದ್ ವರೆಗೆ ಸಾಮೂಹಿಕ ಪ್ರಾರ್ಥನೆಗೆ ಅವಕಾಶ ನೀಡದಿರಲು ನಿರ್ಧರಿಸಲಾಗಿದೆ.

ಕೊರೋನ ಎಲ್ಲೆಡೆ ವ್ಯಾಪಕವಾಗಿ ಹರಡುತ್ತಿರುವ ಹಿನ್ನೆಲೆಯಲ್ಲಿ ಶುಕ್ರವಾರ ಸಂಸ್ಥೆಯ ಗೌರವಾಧ್ಯಕ್ಷ ಹಾಜಿ ಎಂ.ಎಚ್.ಉಮರಬ್ಬ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ಈ ಬಗ್ಗೆ ತೀರ್ಮಾನಿಸಲಾಗಿದೆ. ಬಕ್ರೀದ್ ವರೆಗೆ ಮಸೀದಿಯಲ್ಲಿ ಸಾಮೂಹಿಕ ನಮಾಝ್, ಜುಮಾ, ಹಾಗೂ ಇತರ ಎಲ್ಲ ರೀತಿಯ ಸಾಮೂಹಿಕ ಪ್ರಾರ್ಥನೆಗಳಿಗೆ ಸ್ವಯಂ ನಿರ್ಬಂಧ ಹೇರಲು ಸರ್ವಾನುಮತದಿಂದ ತೀರ್ಮಾನಿಸಲಾಗಿದೆ.

ಈ ನಡುವೆ ಜಮಾಅತ್ ಚಂದಾ ಸದಸ್ಯರು ವೈಯಕ್ತಿಕವಾಗಿ ಮಸೀದಿಗೆ ಭೇಟಿ ನೀಡಿ ಸುರಕ್ಷಿತ ಅಂತರ ಕಾಯ್ದುಕೊಂಡು ನಮಾಝ್ ನಿರ್ವಹಿಸಬಹುದು. ಆದರೆ ಮಸೀದಿಗೆ ಸಂಬಂಧಿಸಿದ ಶೌಚಾಲಯ, ನಮಾಝ್ ಚಾಪೆ ಬಳಸಲು ಅವಕಾಶ ಇರುವುದಿಲ್ಲ.

ಸಭೆಯಲ್ಲಿ ಸಂಸ್ಥೆಯ ಗೌರವಾಧ್ಯಕ್ಷರುಗಳಾದ ಹಾಜಿ ಅಹ್ಮದ್ ಬ್ಯಾರಿ ಕೊರಡಿಹಿತ್ಲು, ಎಸ್.ಎಚ್.ಅಬ್ದುಲ್ ಖಾದರ್, ಸಂಸ್ಥೆಯ ಅಧ್ಯಕ್ಷ ಎಸ್.ಎಚ್.ಮಯ್ಯದ್ದಿ, ಉಪಾಧ್ಯಕ್ಷ ಎಸ್.ಕೆ.ಇಬ್ರಾಹೀಂ, ಕಾರ್ಯದರ್ಶಿ ಝುಬೈರ್ ಅಹ್ಮದ್, ಅಬೂಬಕರ್, ಇಬ್ರಾಹೀಂ, ಸಂಶುದ್ದೀನ್, ಸಾದಿಕ್, ಅಬು ಮುಹಮ್ಮದ್, ಬದ್ರುದ್ದೀನ್, ಮುಹಮ್ಮದ್ ಹುಲುಮಕ್ಕಿ, ಅಬ್ದುಲ್ ಜಲೀಲ್, ಕೆ.ಎಚ್.ಸೂಫಿ, ಹುಸೈನ್ ಸಅದಿ, ಶೌಕತ್, ಅಬ್ಬು ಹಾಗು ಜಮಾಅತ್ ನ ಹಲವಾರು ಹಿರಿಯ ಸದಸ್ಯರು ಉಪಸ್ಥಿತರಿದ್ದರು.
 ಸದರ್ ಮುಅಲ್ಲಿಮ್ ರಫೀಕ್ ಸಅದಿ ದುಆಗೈದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News