×
Ad

ಗ್ರಾಹಕರಿಂದ ಸುಲಿದ ಹಣ ಯಾವ ಸ್ವಿಸ್ ಬ್ಯಾಂಕ್ ಖಾತೆಯಲ್ಲಿ ಜಮೆ ಆಗುತ್ತಿದೆ?: ಸಿದ್ದರಾಮಯ್ಯ

Update: 2020-06-13 20:16 IST

ಬೆಂಗಳೂರು, ಜೂ. 13: ಯುಪಿಎ ಕಾಲದಲ್ಲಿ ಪೆಟ್ರೋಲ್-ಡೀಸೆಲ್ ಮೇಲಿನ ಅಬಕಾರಿ ಸುಂಕ ಕ್ರಮವಾಗಿ 10.70 ರೂ. ಮತ್ತು 4.90 ರೂ. ಇದ್ದದ್ದು ಈಗ ಕ್ರಮವಾಗಿ 32.90 ರೂ. ಮತ್ತು 31.80 ರೂ. ಆಗಿದೆ. ಗ್ರಾಹಕರಿಂದ ಸುಲಿದ ಹಣ ಯಾವ ಸ್ವಿಸ್ ಬ್ಯಾಂಕ್ ಖಾತೆಯಲ್ಲಿ ಜಮೆ ಆಗುತ್ತಿದೆ?' ಎಂದು ವಿಪಕ್ಷ ನಾಯಕ ಸಿದ್ದರಾಮಯ್ಯ ಪ್ರಶ್ನಿಸಿದ್ದಾರೆ.

ಶನಿವಾರ ಸರಣಿ ಟ್ವೀಟ್ ಮಾಡಿರುವ ಅವರು, 'ಕೇಂದ್ರ ಸರಕಾರ ಸತತ ಏಳನೆ ದಿನ ಪೆಟ್ರೋಲ್ ಮತ್ತು ಡೀಸೆಲ್ ಬೆಲೆ ಹೆಚ್ಚಿಸಿದೆ. ಏಳು ದಿನಗಳಲ್ಲಿ ಪೆಟ್ರೋಲ್ ಬೆಲೆ 4.70 ರೂ. ಮತ್ತು ಡೀಸೆಲ್ ಬೆಲೆ 3.40 ರೂ.ಏರಿಕೆಯಾಗಿದೆ. ಆ ಕಡೆ ಕೊರೋನ ಸೋಂಕಿತರ ಸಂಖ್ಯೆ, ಈ ಕಡೆ ಪೆಟ್ರೋಲ್-ಡೀಸೆಲ್ ಬೆಲೆ ಎರಡೂ ಅನಿಯಂತ್ರಿತವಾಗಿ ಏರುತ್ತಿದೆ' ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News