×
Ad

ಮಡಿಕೇರಿ: ನಿವೃತ್ತ ಸೇನಾಧಿಕಾರಿ, ಲೆಫ್ಟಿನೆಂಟ್ ಜನರಲ್ ಸಿ.ಎನ್. ಸೋಮಣ್ಣ ನಿಧನ

Update: 2020-06-13 22:33 IST

ಮಡಿಕೇರಿ, ಜೂ.13: ನಿವೃತ್ತ ಸೇನಾಧಿಕಾರಿ, ಲೆಫ್ಟಿನೆಂಟ್ ಜನರಲ್ ಸಿ.ಎನ್. ಸೋಮಣ್ಣ (92) ಅವರು ಇಂದು ತಮ್ಮ ಸ್ವಗೃಹದಲ್ಲಿ ನಿಧನರಾಗಿದ್ದಾರೆ.

ಭಾರತೀಯ ಸೇನೆಯ ಉಪ ಮುಖ್ಯಸ್ಥರಾಗಿ ಸೇವೆ ಸಲ್ಲಿಸಿರುವ ಲೆ.ಜ. ಸಿ.ಎನ್. ಸೋಮಣ್ಣ ಅವರು, 1984ರಲ್ಲಿ ಅಮೃತಸರದಲ್ಲಿ ನಡೆದ ಬ್ಲೂ ಸ್ಟಾರ್ ಆಪರೇಷನ್‍ನಲ್ಲಿ ಪ್ರಧಾನ ಪಾತ್ರ ವಹಿಸಿದ್ದರು.

ಸೇನಾ ಸೇವೆಯ ಬಳಿಕ ತಮ್ಮ ನಿವೃತ್ತ ಜೀವನವನ್ನು ಪತ್ನಿ ರೇಣು ಸೋಮಣ್ಣ ಅವರೊಂದಿಗೆ ವೀರಾಜಪೇಟೆಯ ಪಂಜರಪೇಟೆ ಬಡಾವಣೆಯ ಲಕ್ಷ್ಮೀ ನಿವಾಸದಲ್ಲಿ ಕಳೆಯುತ್ತಿದ್ದ ಸೋಮಣ್ಣ ಅವರು, ಕಳೆದ ಕೆಲ ತಿಂಗಳಿನಿಂದ ವಯೋ ಸಹಜವಾದ ಅನಾರೋಗ್ಯದಂದ ಬಳಲುತ್ತಿದ್ದು, ಇಂದು ಸಂಜೆ 4 ಗಂಟೆಯ ಸುಮಾರಿಗೆ ಕೊನೆಯುಸಿರೆಳೆದಿದ್ದಾರೆ.

ಮೃತರು ಪತ್ನಿ, ಪುತ್ರ ಡಾ. ನಿವೇದ್ ನಂಜಪ್ಪ, ಪುತ್ರಿ ಶರಣ್ ಪೆಮ್ಮಯ್ಯ ಸೇರಿದಂತೆ ಓರ್ವ ಸಹೋದರ, ಮೂವರು ಸಹೋದರಿಯರನ್ನು ಅಗಲಿದ್ದಾರೆ. ಮೃತರ ಅಂತ್ಯ ಸಂಸ್ಕಾರ ರವಿವಾರ ನಡೆಯಲಿದೆ. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News