×
Ad

ಕಾಡು ಪ್ರಾಣಿಗಳನ್ನು ಬೇಟೆಯಾಡಿ ಟಿಕ್‍ಟಾಕ್ ಮಾಡುತ್ತಿದ್ದ ಆರೋಪ: ಬಂಧನ

Update: 2020-06-14 23:25 IST

ಕಲಬುರ್ಗಿ, ಜೂ.14: ಮೊಲ ಮತ್ತು ಉಡ ಸೇರಿ ಕಾಡು ಪ್ರಾಣಿಗಳನ್ನು ಬೇಟೆಯಾಡಿ ಬಳಿಕ ಟಿಕ್‍ಟಾಕ್ ಮಾಡಿ, ಸಾಮಾಜಿಕ ಜಾಲತಾಣಗಳಲ್ಲಿ ಹರಿಬಿಡುತ್ತಿದ್ದ ಆರೋಪಿಯನ್ನು ಅರಣ್ಯ ಸಂಚಾರಿ ದಳ ಅಧಿಕಾರಿಗಳು ಬಂಧಿಸಿದ್ದಾರೆ.

ಶರಣ ಸಿರಸಗಿ ತಾಂಡಾ ನಿವಾಸಿ ಶಿವಾನಂದ ಹಂಗರಗಿ ಬಂಧಿತ ಆರೋಪಿ ಎಂದು ತಿಳಿದುಬಂದಿದೆ.

ತನ್ನ ಐವರು ಸ್ನೇಹಿತರೊಂದಿಗೆ ಸೇರಿ ಮೊಲ ಹಾಗೂ ಉಡ ಭೇಟೆಯಾಡಿ ಅದರೊಟ್ಟಿಗೆ ಟಿಕ್‍ಟಾಕ್ ಮಾಡುತ್ತಿದ್ದ, ಅದನ್ನು ಗಮನಿಸಿದ ಅರಣ್ಯ ಅಧಿಕಾರಿಗಳು, ವನ್ಯಜೀವಿ ಸಂರಕ್ಷಣಾ ಕಾಯ್ದೆ-1972ರ ಅನ್ವಯ ಪ್ರಕರಣ ದಾಖಲಿಸಿ ಈತನನ್ನು ಬಂಧಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News