ಮಂಡ್ಯ: ಕೊರೋನ ಸೋಂಕಿತರ ಸಂಖ್ಯೆ 343ಕ್ಕೆ ಏರಿಕೆ
Update: 2020-06-14 23:31 IST
ಮಂಡ್ಯ, ಜೂ.14: ಜಿಲ್ಲೆಯಲ್ಲಿ ರವಿವಾರ 5 ಕೊರೋನ ಪ್ರಕರಣಗಳು ವರದಿಯಾಗಿದ್ದು, ಸೋಂಕಿತರ ಸಂಖ್ಯೆ 343ಕ್ಕೆ ಏರಿದೆ. ಒಟ್ಟು 261 ಮಂದಿ ಗುಣಮುಖರಾಗಿ ಬಿಡುಗಡೆಯಾಗಿದ್ದು, 81 ಸಕ್ರಿಯ ಪ್ರಕರಣಗಳಾಗಿವೆ ಎಂದು ಜಿಲ್ಲಾಧಿಕಾರಿ ಡಾ.ಎಂ.ವಿ.ವೆಂಕಟೇಶ್ ತಿಳಿಸಿದ್ದಾರೆ.
ರವಿವಾರ ಮಹಾರಾಷ್ಟ್ರದಿಂದ ನಾಗಮಂಗಲ ತಾಲೂಕಿಗೆ ಬಂದಿರುವ 3 ಮಂದಿ ಹಾಗೂ ಕೆ.ಆರ್.ಪೇಟೆ ತಾಲೂಕಿಗೆ ಬಂದಿರುವ ಒಬ್ಬರಿಗೆ ಸೋಂಕು ತಗಲಿದೆ. ಮಳವಳ್ಳಿ ತಾಲೂಕಿನ 1 ಪ್ರಕರಣವು ಬೆಂಗಳೂರಿನ ವಿಕ್ಟೋರಿಯಾ ಆಸ್ಪತ್ರೆಯ ಐಸೋಲೇಷನ್ ವಾರ್ಡ್‍ಗೆ ಸೇರಿಸಲಾಗಿದೆ ಎಂದು ಅವರು ಹೇಳಿದ್ದಾರೆ.